ನವ್ಯ ನವೇಲಿ…ಅಮಿತಾಬ್ ಬಚ್ಚನ್ ಮೊಮ್ಮಗಳು. ಅಂದ್ರೆ ಬಿಗ್ಬಿ ಮಗಳು ಶ್ವೇತಾ ನಂದಾರ ಮಗಳು. ಕೆಲ ತಿಂಗಳ ಹಿಂದಷ್ಟೇ 18 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾಳೆ.
ಈಗಾಗಲೇ ಅಲ್ಲಿ ಇಲ್ಲಿ ಪಬ್, ಪಾರ್ಟಿಗಳಲ್ಲಿ ಮಿಂಚಿರುವ ಈ ಹುಡುಗಿ ಈಗ ನೇರ ಬಿಕನಿಯಲ್ಲಿ ಕಾಣಿಸಿಕೊಂಡು ಆ ಪೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾಳೆ. ಬೀಚ್ನಲ್ಲಿ ಬ್ಲೂ ಬಿಕನಿಯಲ್ಲಿ ನಡೆಯುತ್ತಿರುವ ನವ್ಯ ನವೇಲಿಯ ಫೋಟೋಗಳು ಈಗ ಹಾಟ್ ಹಾಟ್ ಟಾಪಿಕ್.
ನವ್ಯ ಬಿಕನಿಯಲ್ಲಿರೋ ಇರೋ ಫೋಟೋಗಳನ್ನು ಶೇರ್ ಮಾಡಿರುವುದು ಇದೇ ಮೊದಲಂತೆ. ಕೆಲ ತಿಂಗಳ ಹಿಂದೆ ಮಾಲ್ಡೀವ್ಸ್ಗೆ ಫ್ಯಾಮಿಲಿ ಜೊತೆ ಹೋದಾಗ ನವ್ಯ ಬಿಕನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನವ್ಯ ಲಂಡನ್ನಲ್ಲಿ ಓದ್ತಿದ್ದಾಳೆ. ಸೆವೆನೋಕ್ಸ್ ಶಾಲೆಯಲ್ಲಿ ಓದುತ್ತಿದ್ದಾಳೆ. ಶಾರೂಖ್ ಖಾನ್ ಮಕ್ಕಳಾದ ಅರ್ಯನ್ ಖಾನ್ ಮತ್ತು ಸುಹಾನ ಖಾನ್ ಕೂಡಾ ಇಲ್ಲೇ ಓದುತ್ತಿದ್ದಾರೆ. ಈ ಹಿಂದೆ ಶಾರೂಖ್ ಮಗ ಆರ್ಯನ್ ಜೊತೆಗಿರುವ ಫೋಟೋವೊಂದನ್ನು ನವ್ಯ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಳು. ಆಗ ಅದು ಬಹಳ ಕಮೆಂಟ್ಸ್ ಗಿಟ್ಟಿಸಿತ್ತು.