ಕುಂದಾಪುರ: ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಶುಕ್ರವಾರ ಷಷ್ಠಿ ಮಹೋತ್ಸವವು ಶ್ರದ್ಧಾ ಭಕ್ತಿ ಪೂರ್ವಕವಾಗಿ ನಡೆಯಿತು.
ಸುಬ್ರಹ್ಮಣ್ಯ ದೇವರಿಗೆ ಮಹಾ ಪೂಜೆ, ಪಂಚಾಮೃತ, ಮಡಿ ಪ್ರದಕ್ಷಿಣೆ, ಶುದ್ಧ ಕಲಶ, ಈಶ್ವರನಿಗೆ ರುದ್ರಾಭಿಶೇಕ, ಉರುಳು ಸೇವೆ, ಮಡೆಸ್ನಾನ, ತುಲಾಭಾರ, ಆಶ್ಲೇಷ ಬಲಿ, ನಾಗಮಂಡಲ, ಹೂ-ಕಾಯಿ ಅರ್ಪಣೆ, ನಾಗಸಂಸ್ಕಾರ ಮುಂತಾದ ಸೇವೆಗಳು ನಡೆದುವು. ರಾಜ್ಯದ ಬೇರೆ ಬೇರೆ ಊರುಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಪ್ರತೀ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಳ್ಳಿ ಹರಕೆ ಸೇವೆಯನ್ನು ಸಲ್ಲಿಸಲು ಶುಕ್ರವಾರ ಮುಂಜಾನೆ ೪ ಗಂಟೆಯಿಂದಲೇ ಆಗಮಿಸಿದ್ದರಿಂದ ಸಂಚಾರಿ ವ್ಯವಸ್ಥೆ ನಿರ್ವಹಣೆಗೆ ಹರಸಾಹಸಪಡಬೇಕಾಗಿತ್ತು. ಪ್ರತೀ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಪ್ರಸಾದ ವಿತರಣೆ: ಶ್ರೀ ಸುಬ್ರಮಣ್ಯ ಸನ್ನಿಧಿಯಲ್ಲಿ ಸಂಜೆ ನಡೆದ ಪ್ರಸಾದ ವಿತರಣೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಘೊಂಡಿದ್ದರು. ಭಕ್ತಾಧಿಗಳಿಗೆ ವಡೆ, ಪುಳಿಯೊಗರೆ ಹಾಗೂ ಪಾಯಸವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್, ಗಂಗೊಳ್ಳಿ ಠಾಣೆ ಎಸ್.ಐ. ಸುಬ್ಬಣ್ಣ, ಬೈಂದೂರು ಎಸ್.ಐ. ಸಂತೋಷ್ ಕಾಯ್ಕಿಣಿ, ಅಮಾಸೆಬೈಲು ಎಸ್.ಐ. ಸುನೀಲ್, ಟ್ರಾಫಿಕ್ ಎಸ್.ಐ. ಜಯ, ಮಹಿಳಾ ಠಾಣೆ ಎಸ್.ಐ.ಸುಜಾತಾ ಸಾಲಿಯಾನ್, ಕುಂದಾಪುರ ಠಾಣೆ ಎಸ್.ಐ. ದೇವರಾಜ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ನಿರ್ವಹಿಸಿದರು.