ಕರ್ನಾಟಕ

ಎಸ್‌ಐ ಜಗದೀಶ್‌ ಕೊಲೆ ಪೂರ್ವಯೋಜಿತವಲ್ಲ

Pinterest LinkedIn Tumblr

jagadishಬೆಂಗಳೂರು: ತೀವ್ರ ಸಂಚಲನ ಮೂಡಿಸಿದ್ದ ದೊಡ್ಡಬಳ್ಳಾಪುರ ನಗರ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಕೆ.ಜಿ.ಜಗದೀಶ್‌ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಪೊಲೀಸರು
ಗುರುವಾರ ನೆಲಮಂಗಲದ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಬೆನ್ನಟ್ಟಿ ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಆರೋಪಿಗಳು ಜಗದೀಶ್‌ರನ್ನು ಹತ್ಯೆಗೈದಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿಗಳಾದ ಹರೀಶ್‌ ಬಾಬು, ಮಧು, ಮಧು ತಾಯಿ ತಿಮ್ಮಕ್ಕ, ಅಣ್ಣ ರಘು ಹಾಗೂ ಹನುಮಂತರಾಯ ಹೆಸರು 450 ಪುಟಗಳ ಚಾರ್ಜ್‌ಶೀಟ್‌ನಲ್ಲಿದೆ.

ಪಿಎಸ್‌ಐ ಹತ್ಯೆಗೈದ ಬಳಿಕ ಆರೋಪಿಗಳು ಬೆಂಗಳೂರಿಗೆ ಬಂದು ಚಿತ್ರದುರ್ಗ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ತಿಮ್ಮಕ್ಕ, ರಘು ಹಾಗೂ ಹನುಮಂತರಾಯರಿಂದ ನೆರವು ಸಿಕ್ಕಿತ್ತು. ಆಂಧ್ರದಿಂದ ದೆಹಲಿಗೆ ತೆರಳಿ ಅಜ್ಞಾತ ಸ್ಥಳದಲ್ಲಿ
ಅಡಗಿಕೊಳ್ಳುವುದು ಹಂತಕರಾದ ಮಧು ಮತ್ತು ಹರೀಶ್‌ ಬಾಬು ಯೋಜನೆಯಾಗಿತ್ತು ಎಂದು ವಿವರಿಸಲಾಗಿದೆ.

ಪಿಎಸ್‌ಐ ಕೊಲೆ ಪೂರ್ವನಿಯೋಜಿತವಲ್ಲ. ತಮ್ಮ ಬೆನ್ನಟ್ಟಿ ಬಂದಾಗ ತಪ್ಪಿಸಿಕೊಳ್ಳುವ ದುರುದ್ದೇಶದಿಂದ ಆರೋಪಿಗಳಿಂದ ಹತ್ಯೆ ನಡೆದಿದೆ. ಜಗದೀಶ್‌ ಅವರಿಗೆ ಹರೀಶ್‌ ಬಾಬು ಬಾಕುವಿನಿಂದ ಇರಿದಿದ್ದ ಎಂದು ತನಿಖಾಧಿಕಾರಿಯೂ ಆದ ನೆಲಮಂಗಲ ಉಪ ವಿಭಾಗದ
ಡಿವೈಎಸ್ಪಿ ರಾಜೇಂದ್ರ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ?: ಮನೆಗಳ್ಳತನ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ದೊಡ್ಡಬಳ್ಳಾಪುರ ಪಿಎಸ್‌ಐ ಜಗದೀಶ್‌ ಅವರಿಗೆ ಅ.16 ರಂದು ಆರೋಪಿಗಳಾದ ಮಧು ಮತ್ತು ಹರೀಶ್‌ ಬಾಬು ನೆಲಮಂಗಲ ಪಟ್ಟಣದ ಹೋಂಡಾ ಶೋಂ ರೂಮ್‌ಗೆ ಬೈಕ್‌ ಖರೀದಿಸುವ ಸಂಬಂಧ ಆಗಮಿಸುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ನಾಲ್ವರು ಸಿಬ್ಬಂದಿ ಜತೆ ಆರೋಪಿಗಳ ಬಂಧನಕ್ಕೆ ಜಗದೀಶ್‌ ತೆರಳಿದ್ದರು. ಆ ವೇಳೆ ಪೊಲೀಸರನ್ನು ಕಂಡು ಮಧು ಮತ್ತು ಹರೀಶ್‌ ಬಾಬು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪಿಎಸ್‌ಐ ಬೆನ್ನಟ್ಟಿದ್ದರು. ಆಗ ಪಿಎಸ್‌ಐಗೆ ಬಾಕುವಿನಿಂದ ಇರಿದ ಕೊಂದು ಪಿಸ್ತೂಲ್‌ ಸಮೇತ ಆರೋಪಿಗಳು ತಪ್ಪಿಸಿಕೊಂಡಿದ್ದರು.

ಈ ಕೃತ್ಯವು ರಾಷ್ಟ್ರ ವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರೋಪಿಗಳ ವಿರುದಟಛಿ ಕಠಿಣ ಕ್ರಮಕ್ಕೆ ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಹಂತಕರ ಪತ್ತೆಗೆ ಕೇಂದ್ರ ವಲಯ ಐಜಿಪಿ ಅರುಣ್‌ ಚಕ್ರವರ್ತಿ ನೇತೃತ್ವದಲ್ಲಿ 80 ಪೊಲೀಸರ ತಂಡ ರಚನೆಯಾಯಿತು.

ಕೊನೆಗೆ ಆಂಧ್ರಪ್ರದೇಶದಿಂದ ದೆಹಲಿಗೆ ತೆರಳುವಾಗ ಅ.24 ರಂದು ಆರೋಪಿಗಳನ್ನು ಮಹಾರಾಷ್ಟ್ರದ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಆರೋಪ ಪಟ್ಟಿಯಲ್ಲೇನಿದೆ?
ಕೃತ್ಯ ನಡೆದು ಎರಡು ತಿಂಗಳು 9 ದಿನದಲ್ಲಿ ತನಿಖೆ ಪೂರ್ಣಗೊಳಿಸಿದ ಡಿವೈಎಸ್ಪಿ ರಾಜೇಂದ್ರ ಕುಮಾರ್‌ ಅವರು, ಐವರು ಆರೋಪಿಗಳ ವಿರುದಟಛಿ 450 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ವೈದ್ಯಕೀಯ ವರದಿ ಹಾಗೂ ಬ್ಯಾಲೆಸ್ಟಿಕ್‌ ರಿಪೋರ್ಟ್‌ ಕೂಡ ನೀಡಲಾಗಿದೆ.

ಅಲ್ಲದೆ ಆರೋಪ ಪಟ್ಟಿಯಲ್ಲಿ ತನಿಖಾಧಿಕಾರಿಯೂ ಆದ ಡಿವೈಎಸ್ಪಿ ರಾಜೇಂದ್ರ ಕುಮಾರ್‌ ಸೇರಿ 12 ಪೊಲೀಸರು, 18 ಇತರೆ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಒಟ್ಟು 72 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿವೆ. ಅಲ್ಲದೆ ಆರೋಪಿಗಳಿಂದ 8 ಪ್ರಕರಣಗಳಿಗೆ
ಸಂಬಂಧಿಸಿದ 131 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ, ಎಲೆಕ್ಟ್ರಾನಿಕ್‌ ವಸ್ತುಗಳು, ಸಬ್‌ಇನ್ಸ್‌ಪೆಕ್ಟರ್‌ ಅವರಿಂದ ದೋಚಲಾಗಿದ್ದ ಸರ್ವಿಸ್‌ ರಿವಾಲ್ವಾರ್‌, ಐದು ಗುಂಡುಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ವಿವರಿಸಲಾಗಿದೆ.

ಆರೋಪಿಗಳ ಪೈಕಿ ಹರೀಶ್‌ ಬಾಬು ಏಡ್ಸ್‌ ರೋಗಕ್ಕೆ ತುತ್ತಾಗಿದ್ದಾನೆ. ಇಬ್ಬರೂ ವೃತ್ತಿಪರ ಕಳ್ಳರಾಗಿದ್ದು, ಮನೆಗಳ್ಳತನಕ್ಕೆ ಕುಖ್ಯಾತರಾಗಿದ್ದರು. ಈ ತಂಡದ ವಿರುದಟಛಿ ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅಪರಾಧ ಪ್ರಕರಣಗಳಿವೆ.
-ಉದಯವಾಣಿ

Write A Comment