
ಮಂಗಳೂರು,ಜ.14: ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಅವರಿಗೆ ಸಹ್ಯಾದ್ರಿ ಸಂಚಯನ ಸಮಿತಿಯ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ ಘೆರವು ಮಾಡಿದ ಘಟನೆ ಗುರುವಾರ ಮಂಗಳೂರಿನಲ್ಲಿ ನಡೆದಿದೆ.
ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ವಿರೋಧಿಸಿ ರಾಜ್ಯ ಬಂದ್ ಗೆ ಕರೆ ನೀಡಿದ ಸಂದರ್ಭ ದ.ಕ. ಜಿಲ್ಲೆಯಲ್ಲಿ ಯಾವುದೇ ಬಂದ್ ನಡೆದಿರಲಿಲ್ಲ. ದ.ಕ ಜಿಲ್ಲೆಯ ಜನರಿಗೆ ಮಾನವೀಯತೆ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿರುವುದು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಮಂಗಳೂರಿಗೆ ಬಂದಿದ್ದ ವಾಟಾಳ್ ನಾಗರಾಜ್ ಅವರು ಇಂದು ಮಂಗಳೂರಿನ ಮೋತಿಮಹಲ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೇಸಲು ಅಗಮಿಸಿದ ಸಂಧರ್ಭದಲ್ಲಿ ಸಹ್ಯಾದ್ರಿ ಸಂಚಯನ ವೇದಿಕೆಯ ಸಂಚಾಲಕ ದಿನೇಶ್ ಹೊಳ್ಳ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ವಾಟಾಳ್ ನಾಗರಾಜ್ ಅವರಿಗೆ ಘೆರಾವು ಹಾಕಿದರು.
ಮೊದಲಿಗೆ ಸುದ್ಧಿಗೋಷ್ಠಿ ನಡೆಯುವ ಸ್ಥಳಕ್ಕೆ ತೆರಳಿ ವಾಟಾಳ್ ನಾಗರಾಜ್ ಅವರೊಂದಿಗೆ ಮಾತನಾಡಬೇಕು ಎಂದು ವೇದಿಕೆ ಕಾರ್ಯಕರ್ತರು ಪಟ್ಟು ಹಿಡಿದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಕೊನೆಗೆ ವಾಟಾಳ್ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಕಾನೂನು ಕ್ರಮಕ್ಕೆ ಮುಂದಾದ ಪೊಲೀಸರು ಘೇರಾವ್ ಹಾಕಿದ ಎತ್ತಿನಹೊಳೆ ಹೋರಾಟಗಾರರ ಸಮಿತಿ ಸದಸ್ಯರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.