ಬೆಂಗಳೂರು: ಹಾಸನದಲ್ಲಿ ನನ್ನನ್ನು ಸೋಲಿಸಲೇಬೇಕೆಂದು ಸಿದ್ದರಾಮಯ್ಯ ಸಂಸತ್ ಚುನಾವಣೆಯಲ್ಲಿ ಪ್ರಯತ್ನಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸೋತಿರೋದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರಮಾನಂದ ತಂದಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಈ ಚುನಾವಣೆಯಲ್ಲಿ ನಮ್ಮ ನಿರೀಕ್ಷೆ 6 ರಿಂದ 8 ಸ್ಥಾನ ಇತ್ತು. ಹಾಸನ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ನಮ್ಮ ಪ್ರದರ್ಶನ ತೃಪ್ತಿ ತಂದಿಲ್ಲ. ಆದರೂ ಕೂಡ ನಾಲ್ಕು ಸ್ಥಾನ ಬಂದಿರುವುದು ಸಂತಸ ತಂದಿದೆ. ಮುಂಬರುವ ತಾ.ಪಂ ಚುನಾವಣೆ ಹಾಗೂ ಜಿ.ಪಂ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ ಎಂದು ತಿಳಿಸಿದರು.
ತಾವು ಸೋಲಿಗೆ ಎಂದೂ ಎದೆಗುಂದಿಲ್ಲ. 1989 ರಲ್ಲಿ ನಾನೇ ಸೋತಿದ್ದೆ. ಹಾಸನದಲ್ಲಿನ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ ಎಂದರು. ಇದೇ ಸಂದರ್ಭದಲ್ಲಿ ಸುರೇಶ್ ಕುಮಾರ್ ಪತ್ರ ವಿಚಾರ ಪ್ರತಿಕ್ರಿಯಿಸಿ ಆಫರೇಷನ್ ಕಮಲದಿಂದಲೇ ಇದೆಲ್ಲಾ ಪ್ರಾರಂಭವಾದದ್ದು ಎಂದು ಆರೋಪಿಸಿದರು.