ಭಿಕ್ಷುಕರು ಡಿಫರೆಂಟ್ ಡಿಫರೆಂಟ್ ಆಗಿ ಭಿಕ್ಷೆ ಬೇಡುವುದು, ಮಾಡರ್ನ್ ಅವತಾರ ತಾಳುವುದು ಸಿನಿಮಾಗಳಲ್ಲಿ ಮಾಮೂಲಿ. ಆದರೆ, ಹೈದರಾಬಾದ್‌ನಲ್ಲಿ ಮೊನ್ನೆ ನಡೆದ ಘಟನೆಯೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಅಂತಹದೇನಪ್ಪಾ ಅಂತೀರಾ? ಹೈದರಾಬಾದ್‌ನಲ್ಲೊಬ್ಬ ಭಿಕ್ಷೆ ಬೇಡುತ್ತಾ ಕಾರ್‌ವೊಂದರ ಬಳಿ ತೆರಳಿದ್ದಾನೆ. ಆ ಕಾರಿನಲ್ಲಿದ್ದ ಮಹಿಳೆ ಚಿಲ್ಲರೆ ಇಲ್ಲಾ ಹೋಗಪ್ಪ ಎಂದಿದ್ದಾಳೆ. ತಕ್ಷಣ ಕಾರ್ಡ್ ಸ್ವೆ„ಪ್ ಮಷಿನ್ ತೆಗೆದ ಆ ಭಿಕ್ಷುಕ, ಚಿಲ್ಲರೆ ಇಲ್ಲದಿದ್ರೆ ಏನಂತೆ ಎಟಿಎಂ ಕಾರ್ಡ್ ಸ್ವೆಪ್ ಮಾಡಿ ಎನ್ನುವುದೇ! ಇದನ್ನು ಕಂಡು ಮಹಿಳೆ ದಂಗಾಗಿದ್ದಾಳೆ. ಭಿಕ್ಷುಕ ಸ್ವೆ„ಪಿಂಗ್ ಮಷಿನ್ ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.
-ಉದಯವಾಣಿ