
ಉಳ್ಳಾಲ. ಡಿ,23 : ಇಲಲ್ ಹಬೀಬ್ ಮೀಲಾದ್ ಮಾಸಾಚರಣೆಯ ಪ್ರಯುಕ್ತ ಎಸೆಸೆಫ್ ಉಳ್ಳಾಲ ಸೆಕ್ಟರ್ ಮೀಲಾದ್ ರ್‍ಯಾಲಿಯ ಪ್ರಚಾರಾರ್ಥ ಎಸ್ಸೆಸಫ್ ಹಳೆಕೋಟೆ ಶಾಖೆ ಉಳ್ಳಾಲ ಇದರ ವತಿಯಿಂದ ಉಚಿತ ರಕ್ತ ವರ್ಗೀಕರಣ ಶಿಬಿರ ಹಳೆಕೋಟೆ ಸೈಯ್ಯಿದ್ ಮದನಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಶಾಖಾಧ್ಯಕ್ಷ ಮುಹಮ್ಮದ್ ಮದನಿಯವರ ಅಧ್ಯಕ್ಷತೆ ವಹಿಸಿದರು. ಹಳೆಕೋಟೆ ಶಿಕ್ಷಣ ಸಂಸ್ಥೆಗಳ ಮುಖ್ಯೋಪಾಧ್ಯಯರಾದ ಕೆ.ಎಂ.ಕೆ. ಮಂಜನಾಡಿ ಸಭಾಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು. ಮುಹಮ್ಮದ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ಯಮಿ ಹಮೀದ್ ಕಣ್ಣೂರ್ ಶಿಬಿರವನ್ನು ಉದ್ಘಾಟಿಸಿದರು. ಎಸ್‌ವೈಎಸ್. ಹಳೆಕೋಟೆ ಶಾಖಾಧ್ಯಕ್ಷ ಮುಹಮ್ಮದ್, ಅಕ್ಕರೆಕೆರೆ ಶಾಖಾಧ್ಯಕ್ಷ ಅಬ್ದುಲ್ ಲತೀಫ್, ಕ್ಯಾಂಪ್ ಅಮೀರ್ ಹಾಶಿರ್, ಅಲ್ ಅಮೀನ್ ರಿಲೀಫ್ ಫೌಂಡೇಶನ್ ಕಾರ್ಯದರ್ಶಿ ಫಾರೂಕ್ ಬೊಟ್ಟು, ಶಾಖಾ ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಕಾರ್ಯಕರ್ತರಾದ ಅಬ್ದುಲ್ ಘನಿ, ಉಮರ್ ತಲ್ಹತ್, ಸದ್ದಾಂ ಹುಸೈನ್, ರಿಲ್ವಾನ್ ಶಾ, ಎಸ್.ಬಿ.ಎಸ್. ಪ್ರಮುಖರಾದ ನಬೀಲ್, ಸಫ್ರಾಝ್, ಶಹದ್, ಸೈಝಾನ್ ಮತ್ತಿತರು ಯಶಸ್ಸಿಗಾಗಿ ಸಹಕರಿಸಿದರು. ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿದರು.