ರಾಷ್ಟ್ರೀಯ

ಕಣ್ಣೆದುರೇ ನಡೆದ ತಂದೆಯ ಹತ್ಯೆಯ ಸೇಡನ್ನು 12 ವರ್ಷ ಕಾದು ಕೊನೆಗೂ ತೀರಿಸಿಕೊಂಡ ಮಗ ! ಏನಿದು ಘಟನೆ ..ಇಲ್ಲಿದೆ ಓದಿ…

Pinterest LinkedIn Tumblr

mur

ಮೊರಾದಾಬಾದ್: ಇದು ಸೇಡಿನ ಸುಳಿಗೆ ಸಿಕ್ಕ ಬಿಸಿರಕ್ತದ ಹುಡುಗನೊಬ್ಬನ ಪಾತಕದ ಕಥೆ. 12 ವರ್ಷದವನಿದ್ದಾಗ ಕಣ್ಣೆದುರೇ ನಡೆದ ತನ್ನ ತಂದೆಯ ಕೊಲೆ ಘಟನೆಯ ಸೇಡು ಆತನ ಮನಸ್ಸೊಳಗೆ 12 ವರ್ಷಗಳ ಕಾಲ ಕುದಿಯುತ್ತಲೇ ಇತ್ತು ಹಾವಿನ ದ್ವೇಷದಂತೆ. ಕೊಲೆ ಮಾಡಿದಾತನಿಗೆ ಅಂತ್ಯ ಹಾಡುವ ದಿನಕ್ಕಾಗಿ ಕಾದಿದ್ದ. ಅಂತೂ ಆತನ ಸ್ನೇಹ ಸಂಪಾದಿಸಿ, ತನ್ನ ಮನೆಗೇ ಕರೆದು, ಕುಡಿಸಿ ಚಾಕುವಿನಿಂದ ಭೀಕರವಾಗಿ ಕತ್ತರಿಸಿ ಹಾಕುವ ಮೂಲಕ ಸೇಡು ತೀರಿಸಿಕೊಂಡ.

ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. 12 ವರ್ಷದ ತನ್ನ ಕಾಯುವಿಕೆಗಾಗಿ ಶವವನ್ನು 12 ತುಂಡುಗಳಾಗಿ ಕತ್ತರಿಸಿ, ಪಾಲಿಬ್ಯಾಗ್‍ನಲ್ಲಿ ಹಾಕಿ ನದಿ ದಡದಲ್ಲಿ ಎಸೆದುಬಂದ.

ಈ ವಿಚಿತ್ರ ಘಟನೆಯ ಪಾತ್ರದಾರಿಗಳು ತನ್ನ ತಂದೆಯ ಕೊಲೆ ಸೇಡು ತೀರಿಸಿಕೊಂಡ 24 ವರ್ಷದ ಆಲಂ ಖಾನ್ ಹಾಗೂ ತಾನೇ ಕೊಂದವನ ಮಗನ ಕೈಯಲ್ಲೇ ಕೊಲೆಯಾದ ಮೊಹಮ್ಮದ್ ರಾಯಸ್. ದೇಹದ ತುಂಡುಗಳು ನದಿ ದಡದಲ್ಲಿ ಕಂಡಾಗ ಜನ ಬೆಚ್ಚಿ ಪೊಲೀಸರಿಗೆ ವಿಷಯ ತಿಳಿಸಿದರು.

ಆಗ ದೇಹವನ್ನು ಗುರುತಿಸಿದ ಕೊಲೆಯಾದವನ ಸಹೋದರ, ತನ್ನ ಅಣ್ಮ ಕೊನೆಯ ಬಾರಿಗೆ ಕಂಡದ್ದು ಆಲಂ ಖಾನ್ ಮನೆಯಲ್ಲಿ ಎಂದಾಗ ಸುಳಿವು ಬೆನ್ನತ್ತಿಗೆ ಪೊಲೀಸರ ಮುಂದೆ ಆಲಂ ಖಾನ್ ತಪ್ಪೊಪ್ಪಿಕೊಂಡ. ಅಲ್ಲದೆ, ಹನ್ನೆರಡು ವರ್ಷಗಳ ಆಸೆ ಈಡೇರಿದೆ. ಆ ಬಗ್ಗೆ ನನಗೆ ಖುಷಿ ಇದೆ ಎಂದಿದ್ದಾನೆ ಆಲಂ ಖಾನ್.

Write A Comment