ರಾಷ್ಟ್ರೀಯ

ಜಗತ್ತಿನ ಅತೀ ದೊಡ್ಡ ಜಟಾಯು ಪ್ರತಿಮೆ ನೋಡಲು ಬನ್ನಿ: ಕೇರಳದಲ್ಲಿ ಅನಾವರಣಗೊಳ್ಳಲಿದೆ ಜಟಾಯು ನೇಚರ್ ಪಾರ್ಕ್

Pinterest LinkedIn Tumblr

jatayu_park

ರಾಮಾಯಣದಲ್ಸೀಲಿ ತೆಯನ್ನು ರಾವಣ ಅಪಹರಿಸಿಕೊಂಡು ಹೋಗುವಾಗ ಆತನನ್ನು ಅಡ್ಡಗಟ್ಟಿ ಸೀತೆಯನ್ನು ರಕ್ಷಿಸಲು ಹೋರಾಡಿದ ಜಟಾಯು ಕತೆ ನೆನಪಿದೆಯಾ? ಹಾಗೆ ರಾವಣನ ಜತೆ ಯುದ್ಧ ಮಾಡಿ ರೆಕ್ಕೆ ಮುರಿದ ಜಟಾಯು ಬಿದ್ದದ್ದು ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲದಲ್ಲಿ ಎಂಬ ಐತಿಹ್ಯವಿದೆ. ಜಟಾಯು ಬಂದು ಬಿದ್ದ ಆ ಬಂಡೆಯನ್ನು ಜಟಾಯು ಬಂಡೆ ಎಂದೇ ಕರೆಯಲಾಗುತ್ತಿದೆ. ಈಗ ಜಟಾಯು ಬಂಡೆಯಲ್ಲಿ ಜಟಾಯು ಮತ್ತೆ ರೆಕ್ಕೆ ಬಿಚ್ಚಲಿದೆ.

ಜಟಾಯು ನೇಚರ್ ಪಾರ್ಕ್ ಎಂಬ ಹೆಸರಿನಲ್ಲಿ ಚಡಯ ಮಂಗಲದಲ್ಲಿ ಹೊಸತೊಂದು ಪಾರ್ಕ್ 2016ರ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಸಿನಿಮಾ ನಿರ್ದೇಶಕ ರಾಜೀವ್ ಅಂಚಲ್ ಅವರ ಆಶಯದೊಂದಿಗೆ ಸಜ್ಜಾದ ಈ ಪಾರ್ಕ್ ಕೇರಳ ಪ್ರವಾಸೋದ್ಯಮದಲ್ಲಿ ಮಹತ್ತರ ಪಾತ್ರ ವಹಿಸಲಿದೆ .

ಕಲೆ ಮತ್ತು ಇತಿಹಾಸವನ್ನು ಸಮ್ಮಿಶ್ರವಾಗಿರಿಸಿದ ಈ ಪಾರ್ಕ್‌ನಲ್ಲಿರುವ ಜಟಾಯು ಪ್ರತಿಮೆ ಜಗತ್ತಿನ ಅತೀ ದೊಡ್ಡ ಜಟಾಯು ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 65 ಎಕರೆ ಸ್ಥಳದಲ್ಲಿ ರೆಕ್ಕೆ ಬಿಚ್ಚಿರುವ ಜಟಾಯು ಪ್ರತಿಮೆ 150 ಅಡಿ ಅಗಲವೂ 70 ಅಡಿ ಎತ್ತರವೂ ಇದೆ. ನೆಲ ಭಾಗದಿಂದ  100 ಅಡಿ ಎತ್ತರದಲ್ಲಿ 15,000 ಚದರ ಅಡಿಯಲ್ಲಿ ಈ ನೇಚರ್  ಪಾರ್ಕ್ ಸಿದ್ಧಗೊಂಡಿದೆ.

ರಾವಣನ ಜತೆಗಿನ ಯುದ್ಧದಲ್ಲಿ ಜಟಾಯುವಿನ ಒಂದು ರೆಕ್ಕೆ ತುಂಡಾಗಿ ಹೋಗಿತ್ತು. ಆದ್ದರಿಂದ ಇಲ್ಲಿರುವ ಜಟಾಯುವಿಗೂ ಒಂದೇ ರೆಕ್ಕೆ. ಕಲ್ಲಿನಲ್ಲಿ ಕೆತ್ತಲಾದ ಈ ದೈತ್ಯ ಜಟಾಯು ಪ್ರತಿಮೆಯನ್ನು ವೀಕ್ಷಿಸಲು ಕೇಬಲ್ ಕಾರ್ ಕೂಡಾ ಸಿದ್ಧಪಡಿಸಲಾಗುತ್ತಿದೆ.

Write A Comment