ಕರ್ನಾಟಕ

ಸಿದ್ದು ನಾಲಿಗೆಯಲ್ಲಿ ಉಲ್ಟಾ ಮಚ್ಚೆ: ಈಶ್ವರಪ್ಪ

Pinterest LinkedIn Tumblr

Eshwarappa-K-S-750

ಹುಳಿಯಾರು (ತುಮಕೂರು): ಸಿಎಂ ಸಿದ್ದರಾಮಯ್ಯ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದ್ದಂತೆ ಕಾಣುತ್ತೆ. ಬಿಜೆಪಿ ಬಗ್ಗೆ ಅವರೇನೇ ಹೇಳಿದರೂ ಅದು ಉಲ್ಟಾ ಆಗುತ್ತದೆ. ಸಿದ್ದರಾಮಯ್ಯ ನುಡಿಯಿಂದಲೇ ಬಿಜೆಪಿಗೆ ಶುಕ್ರದೆಸೆ ಬರುತ್ತದೆ. ಹೀಗಾಗಿ ಅವರು ಬಿಜೆಪಿ ವಿರುದ್ಧ ವಾಗ್ಧಾಳಿ ಮುಂದುವರಿಸಲಿ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಕುಹಕವಾಡಿದರು.

ಇಲ್ಲಿನ ಸಮೀಪ ಕಾರೇಹಳ್ಳಿಯಲ್ಲಿ ಮೇಲ್ಮನೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಿ ಆಗೋದೇ ಇಲ್ಲ ಅಂದ್ರು. ಆದರೆ ಆದ್ರು. ಲೋಕಸಭೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲ್ಲ ಅಂದ್ರು. ಕಾಂಗ್ರೆಸ್‌ ಧೂಳೀಪಟ ಆಗುವಷ್ಟು ಸೀಟು ಗೆದ್ವಿ. ಬಿಬಿಎಂಪಿಯಲ್ಲೂ ಇದೇ ಆಗಿದೆ. ಈಗ ವಿಧಾನಪರಿಷತ್‌ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮಾತಿನ ಹರಕೆಯಿಂದ ಹೆಚ್ಚು ಸ್ಥಾನ ಗೆದ್ದೆ ಗೆಲ್ತೀವಿ ನೋಡ್ತಾ ಇರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-ಉದಯವಾಣಿ

Write A Comment