ಕರ್ನಾಟಕ

ರಾಯಚೂರು: ಶೌಚಾಲಯದಲ್ಲಿ ನೇಣು ಹಾಕಿಕೊಂಡು ಪತ್ನಿಯನ್ನು ಕೊಂದಿದ್ದ ಆರೋಪಿ ಆತ್ಮಹತ್ಯೆ

Pinterest LinkedIn Tumblr

suuರಾಯಚೂರು, ಡಿ.16-ಪತ್ನಿ ಕೊಲೆ ಆರೋಪದ ಮೇಲೆ ಕಾರಾಗೃಹದಲ್ಲಿದ್ದ ಆರೋಪಿಯು ಇಂದು ಶೌಚಾಲಯದ ವೆಂಟಿಲೇಟರ್‌ಗೆ ನೇಣು ಬಿಗಿದುಕೊಂಡು ಆತ್ಮಹತ ಮಾಡಿಕೊಂಡಿರುವ ಘಟನೆ ನಡೆದಿದೆ.

ಗೋಪಾಲನಾಯಕ್ (45) ಆತ್ಮಹತ್ಯೆಗೆ ಶರಣಾದ ಆರೋಪಿ. ಪತ್ನಿ ಕೊಲೆ ಆರೋಪದ ಮೇಲೆ ಗೋಪಾಲನಾಯಕ್‌ನನ್ನು 9 ತಿಂಗಳ ಹಿಂದೆ ಬಂಧಿಸಲಾಗಿತ್ತು. ಆದರೆ, 9 ತಿಂಗಳಿಂದ ಜಾಮೀನು ಸಿಗದೇ ಇರುವುದರಿಂದ ಮನನೊಂದು ಕಾರಾಗೃಹದಲ್ಲಿರುವ ಶೌಚಾಲಯದ ವೆಂಟಿಲೇಟರ್‌ಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment