ಉಡುಪಿ: ಉಡುಪಿ ಜಿಲ್ಲಾ ಎಸ್ಪಿ ಕೆ. ಅಣ್ಣಾಮಲೈ ಅವರ ವರ್ಗಾವಣೆ ಬಗ್ಗೆ ಪತ್ರಿಕೆ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಬರುತ್ತಿದ್ದು, ಈ ನಿಲುವು ಸರಿಯಲ್ಲ ಎಂಬುದನ್ನು ಸ್ಪಷ್ಟವಾಗಿ ಸರಕಾರ ಹಾಗೂ ಉಸ್ತುವಾರಿ ಸಚಿವರಿಗೆ ತಿಳಿಸುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಹೇಳಿದ್ದಾರೆ.

ರಾಜ್ಯ ಸರಕಾರ ಅಧಿಕಾರ ಬಂದ ಈ ಎರಡು ವರ್ಷದಲ್ಲಿ ಉಡುಪಿ ಜಿಲ್ಲೆ ಐದು ಜಿಲ್ಲಾಧಿಕಾರಿಗಳು, ಮೂರು ಎಸ್ಪಿಗಳು ಬದಲಾಗಿದ್ದಾರೆ. ಅನೇಕ ಪ್ರಮುಖ ಸ್ಥಳಗಳಲ್ಲಿನಾಧಿಕಾರಿಗಳ ವರ್ಗಾವಣೆ ಮಿತಿ ಮೀರಿದೆ. ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡದ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ವರ್ಗಾವಣೆ ವಿಚಾರದಲ್ಲಿ ವಿರೋದವಿಲ್ಲ ಆದರೇ ಪದೇ ಪದೇ ಅಧಿಕಾರಿಗಳ ವರ್ಗ ಸರಿಯಲ್ಲ. ಒಂದು ಜಿಲ್ಲೆಯಲ್ಲಿ ಕನಿಷ್ಟ ಎರಡು-ಮೂರು ವರ್ಷ ಓರ್ವ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕೆಲಸ ಮಾಡದಿದ್ದರೇ ಆ ಜಿಲ್ಲೆಯ ಅಭಿವ್ರದ್ಧಿಯೂ ಆಗಲ್ಲ, ಕಾನೂನು ಸುವ್ಯವಸ್ಥೆಯೂ ಸಮರ್ಪಕವಾಗಿರುವುದಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಉತ್ತಮ ಕೆಲಸ ಮಾಡಿ ಕಾನೂನು ಸುವ್ಯವಸ್ಥೆ ನೆಲೆಸುವಂತೆ ಮಾಡಿದ್ದರೇ ಇವರಂತಹ ದಕ್ಷ ಹಾಗೂ ಖಡಕ್ ಅಧಿಕಾರಿಯ ವರ್ಗಾವಣೆ ಮಾಡುವ ದುಸ್ಸಾಹಸ ಮಾಡುವುದು ಸರಿಯಲ್ಲ. ಇವರಂತಹಾ ಅಧಿಕಾರಿಗಳು ಜಿಲ್ಲೆಗೆ ಬೇಕಿದೆ ಆದ್ದರಿಂದ ಅವರನ್ನು ಒಂದು ವರ್ಷಗಳ ಕಾಲ ಮುಂದುವರೆಸಬೇಕು ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ.