ರಾಷ್ಟ್ರೀಯ

ಮೋದಿ ಜೊತೆ ಗಂಗಾ ಆರತಿಯಲ್ಲಿ ಪಾಲ್ಗೊಂಡ ಜಪಾನ್ ಪ್ರಧಾನಿ ಅಬೆ

Pinterest LinkedIn Tumblr

abe-modi

ವಾರಾಣಸಿ: ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಅವರ ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಸಿದ್ಧ ಗಂಗಾ ಆರತಿಯಲ್ಲಿ ಪಾಲ್ಗೊಂಡು, ಗಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸಿದರು.

ದಶಾಶ್ವಮೇಧ ಘಾಟನಲ್ಲಿ ನಡೆದ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಹಾಗೂ ಅಬೆ ಗಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸಿದರು.

ಜಪಾನ್ ಪ್ರಧಾನಿಯ ಕಾಶಿ ಪ್ರವಾಸದಿಂದಾಗಿ ಉಭಯ ದೇಶಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯದಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿದೆ ಎಂದು ಭಾವಿಸಲಾಗಿದೆ.

ಅಬೆ ಅವರು ಸುಮಾರು ನಾಲ್ಕೂವರೆ ತಾಸುಗಳನ್ನು ವಾರಾಣಸಿಯಲ್ಲಿ ಕಳೆಯಲಿರುವ ಹಿನ್ನೆಲೆಯಲ್ಲಿ ಗಂಗಾನದಿಯ ತಟದಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಿಸಲಾಗಿದೆ. ಭದ್ರತೆಗಾಗಿ ಸೇನೆ ಹಾಗೂ ನೌಕಾ ಸಿಬ್ಬಂದಿ ನಿಯೋಜಿಸಲಾಗಿದೆ.

Write A Comment