ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ತನ್ನ ಹದಿನೈದನೆ ವರ್ಷದ ಸುಸಂಧರ್ಬದಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಹಾಗೂ 44ನೇ ಯು ಎ ಇ ರಾಷ್ಟ್ರೀಯ ದಿನಾಚರಣೆ ಯ ಸಲುವಾಗಿ ಡಿಸೆಂಬರ್ 11 ರಂದು ಓದ್ ಮೇತಾದಲ್ಲಿರುವ ಇರಾನಿಯನ್ ಕ್ಲಬ್ ಹತ್ತಿರ ವಿರುವ ಜೇಮ್ಸ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹಲವಾರು ಉಲಮಾ – ಉಮರಾ ನೇತಾರರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಅರಬ್ ರಾಷ್ಟ್ರಗಳ ವಿವಿದ ಸಂಘ ಸಂಸ್ಥೆಗಳ ಪೋಷಕರು ಕೆ ಐ ಸಿ ಹಿತೈಷಿಗಳು ಉಪಸ್ತಿತರಿರಲಿದ್ದು ಸುಮಾರು ಒಂದು ಸಾವಿಕ್ಕಿಂತಲೂ ಅಧಿಕ ಕೆ ಐ ಸಿ ಹಿತೈಷಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆ ಪ್ರಯುಕ್ತ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಅಧೀನದಲ್ಲಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವ ಸಲುವಾಗಿ , ಹಾಗೂ ಪ್ರಚಾರ ಕಾರ್ಯಕ್ರಮ ಕುರಿತು ಪೂರ್ವ ಭಾವಿ ಸಭೆಯು ಇತ್ತೇಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಹುಲ್ ಬಿ ಸಿ ರೋಡ್ ರವರು ಪ್ರಾರ್ಥಿಸಿ ಕೆ ಐ ಸಿ ಆಯೋಜಿಸಿರುವ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮವು ಸಂಪೂರ್ಣ ಯಶಸ್ಸನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.
ನಂತರ ಯೂತ್ ವಿಂಗ್ ಗೌರವಾಧ್ಯಕ್ಷರಾದ ರಫೀಕ್ ಆತೂರು ರವರು ಉದ್ಘಾಟಿಸಿ ಮಾತನಾಡಿ ಹದಿನೈದು ವರ್ಷಗಳನ್ನು ದಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ರಾಂತಿಯ ಮೂಲಕ ಪೂರೈಸಿದ ಈ ಸಂಸ್ಥೆಯು ಇಂದು ಅದೆಷ್ಟೋ ವಿಧ್ಯಾರ್ಥಿಗಳ ಬಾಳಲ್ಲಿ ಬೆಳಕನ್ನು ಚೆಲ್ಲಿದ್ದು ಪ್ರಸಕ್ತ ತನ್ನ ಕಾರ್ಯಚಟುವಟಿಕೆ ಗಳನ್ನು ಸಮುದಾಯದ ಮುಂದೆ ಸಮರ್ಪಿಸುವ ಸಲುವಾಗಿ ಹಾಗೂ ಯು ಎ ಇ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗಿಗಲಾಗುವ ಉದ್ದೇಶದಿಂದ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಪದಾದಿಕಾರಿಗಳಾದ ತಾವೆಲ್ಲರೂ ಉತ್ಸಾಹದಿಂದ ಆಯೋಜಕರೊಂದಿಗೆ ಸಹಕರಿಸುವಂತೆ ಕೇಳಿಕೊಂಡರು .
ನಂತರ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಯೂತ್ ವಿಂಗ್ ಅಧ್ಯಕ್ಷರಾದ ಜಬ್ಬಾರ್ ಬೈತಡ್ಕ ರವರು, ತಾಯಿನಾಡಿನಿಂದ ಉಲಮಾ ಉಮರಾ ಶ್ರೇಷ್ಟರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು , ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವುದು ಯುವ ಪಡೆಗಳಾದ ನಮ್ಮೆಲ್ಲರ ಮೇಲಿನ ಆಧ್ಯ ಕರ್ತವ್ಯವಾಗಿದ್ದು ,ಉಧ್ಯೊಗ ಉದ್ಯಮದ ನಡೆವೆ ಬಿಡುವಿನ ಸಮಯವನ್ನು ಈ ಕಾರ್ಯಕ್ರಮದ ಪ್ರಚಾರಕ್ಕೆ ಸದ್ಬಳಕೆಮಾಡಿಕೊಂಡು ಸಹಕರಿಸುವಂತೆ ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಸದಸ್ಯರ ಕ್ರಿಸ್ಟಲ್ ಜುಬಿಲಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಸಂಪೂರ್ಣ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಅತಿಥಿಗಳನ್ನು ಸ್ವಾಗತಿಸಿ , ಕಾರ್ಯಕ್ರಮದಲ್ಲಿ ಯೂತ್ ವಿಂಗ್ ಕಾರ್ಯನಿರ್ವಹಿಸಬೇಕಾದ ರೀತಿ ನೀತಿ , ಪ್ರಚಾರಾ ಕಾರ್ಯಕ್ರಮಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ಕೇವಲ ಬೆರಳೆಣಿಕೆ ದಿನಗಳಲ್ಲಿ ಎಲ್ಲಾ ಪಧಾಧಿಕಾರಿಗಳು ಸಕ್ರಿಯರಾಗುವಂತೆ ಕೇಳಿಕೊಂಡು ನಾಸೀರ್ ಬಪ್ಪಲಿಗೆಯವರು ವಂದಿಸಿದರು.


