ಮುಂಬೈ: ಸಿನೆಮಾಗೆ ಮುಂಚಿತವಾಗಿ ಪ್ರದರ್ಶನವಾಗುವ ರಾಷ್ಟ್ರಗೀತೆಗೆ ಎದ್ದು ನಿಲ್ಲಲಿಲ್ಲ ಎಂದು ಮುಸ್ಲಿಂ ಕುಟುಂಬದ ಮೇಲೆ ಅನುಚಿತವಾಗಿ ವರ್ತಿಸಿ ಅವರನ್ನು ಹೊರಹಾಕಿದ ಘಟನೆಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ನಡೆ ತಾಲಿಬಾನ್ ಸಂಸ್ಕೃತಿಯನ್ನು ಸೂಚಿಸುತ್ತದೆ ಎಂದಿದ್ದಾರೆ.
“ಗೌರವ ಒಳಗಿನಿಂದ ಬರಬೇಕು ಅದನ್ನು ಹೇರುವುದಲ್ಲ… ರಾಷ್ಟ್ರಗೀತೆಗೆ ಎದ್ದು ನಿಲ್ಲಲಿಲ್ಲ ಎಂದು ಯಾರನ್ನಾದರೂ ಹೊಡೆಯುವುದು ತಾಲಿಬಾನ್ ಸಂಸ್ಕೃತಿ” ಎಂದು ವರ್ಮಾ ಬುಧವಾರ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.
‘ಸರ್ಕಾರ್’, ‘ಕೌನ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಮೇರು ನಿರ್ದೇಶಕ್ ಆರ್ ಜಿ ವಿ, ಇಂತಹ ಘಟನೆಗಳು ‘ಅಸಹಿಷ್ಣುತೆಯ ತುತ್ತತುದಿ’ ಎಂದಿದ್ದಾರೆ.
