ರಾಷ್ಟ್ರೀಯ

ಸಹಿಷ್ಣುತೆ ವಿಶ್ವದ ಅಗತ್ಯ: ಮುಖರ್ಜಿ

Pinterest LinkedIn Tumblr

Pranba______ಹೊಸದಿಲ್ಲಿ, ನ.21: ವಿಶ್ವವೀಗ ‘ಅಸಹಿಷ್ಣುತೆ’ಯ ಕೆಟ್ಟ ಪ್ರಭಾವವನ್ನು ನಿಭಾಯಿಸಲು ಹೋರಾಡುತ್ತಿದೆಯೆಂದು ಉಲ್ಲೇಖಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಆಧುನಿಕ ಭಾರತದ ವಿವಿಧತೆಯ ವೌಲ್ಯಗಳನ್ನು ಮರುಸ್ಥಾಪಿಸುವ ಹಾಗೂ ಅವುಗಳನ್ನು ವಿಶ್ವಾದ್ಯಂತ ಉತ್ತೇಜಿಸುವ ಸಮಯ ಬಂದಿದೆ ಎಂದಿದ್ದಾರೆ.

ಭಾರತಾಧ್ಯಯನಕಾರರ ಪ್ರಪ್ರಥಮ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೇವಲ ಸಹಿಷ್ಣುತೆಯನ್ನು ಮಾತ್ರವಲ್ಲದೆ ಸಹಾನುಭೂತಿಯ ತತ್ವವನ್ನು ವಿಶ್ವ ಭಾರತದಿಂದ ಇನ್ನಷ್ಟೇ ಕಲಿಯಬೇಕಿದೆ’ ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನುಲ್ಲೇಖಿಸಿ ಭಾರತವು ಖ್ಯಾತಿ ಪಡೆದಿರುವ ಉನ್ನತ ವೌಲ್ಯಗಳನ್ನು ಜನರಿಗೆ ನೆನಪಿಸ ಬಯಸಿದರು.

ನಾವಿಂದು ಪೂರ್ವೋದಾಹರಣೆಯಿಲ್ಲದ ಘಟನೆಗಳನ್ನು ಕಾಣುತ್ತಿದ್ದೇವೆ. ಮಾನವ ಜನಾಂಗ ಇದುವರೆಗೆ ನೋಡದಿರುವ ಅಸಹಿಷ್ಣುತೆ ಹಾಗೂ ದ್ವೇಷಗಳ ಕೆಟ್ಟ ಪರಿಣಾಮವನ್ನು ನಿಭಾಯಿಸಲು ಹೆಣಗುತ್ತಿದೆಯೆಂದು ಮುಖರ್ಜಿ ಹೇಳಿದರು.

ಇಂತಹ ಸಂದರ್ಭದಲ್ಲಿ, ನಾವು ಉನ್ನತ ವೌಲ್ಯಗಳು, ಲಿಖಿತ ಹಾಗೂ ಅಲಿಖಿತ ಸಂಸ್ಕಾರಗಳು (ಪರಂಪರೆ), ಕರ್ತವ್ಯಗಳು ಹಾಗೂ ಭಾರತದ ಸಾರಸರ್ವಸ್ವವಾಗಿರುವ ಜೀವನ ವಿಧಾನ ಗಳನ್ನು ನೆನಪಿಸಿಕೊಳ್ಳುವುದಕ್ಕಿಂತ ಹೊರತಾದ ಉತ್ತಮ ಪರಿಹಾರ ವಿರಲು ಸಾಧ್ಯವಿಲ್ಲವೆಂದು ಅವರು ತಿಳಿಸಿದರು.

ಆಧುನಿಕ ಭಾರತದ ಜಟಿಲ ವಿವಿಧತೆಯನ್ನು ಒಂದಾಗಿ ಬಂಧಿಸಿರುವ ನಾಗರಿಕತೆಯ ವೌಲ್ಯಗಳನ್ನು ಮರುಸ್ಥಾಪಿಸಲು ಹಾಗೂ ಅವುಗಳನ್ನು ನಮ್ಮ ಜನರಲ್ಲಿ ಹಾಗೂ ವಿಶ್ವದಲ್ಲಿ ಉತ್ತೇಜಿಸಲು ಇದು ಸಕಾಲವೆಂದು ಮುಖರ್ಜಿ ಒತ್ತಿ ಹೇಳಿದರು. ದಾದ್ರಿ ಹತ್ಯಾಪ್ರಕರಣ ಹಾಗೂ ಆ ಬಳಿಕದ ಕೆಲವು ಘಟನೆಗಳ ನಂತರ ಮುಖರ್ಜಿ ಸಹಿಷ್ಣುತೆ ಹಾಗೂ ಬಹುತ್ವಕ್ಕಾಗಿ ಮನವಿ ಮಾಡುತ್ತಿದ್ದಾರೆ.

ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಸಾಂಸ್ಕೃತಿಕ ಸಂಬಂಧ ಮಂಡಳಿಗಳು ಸ್ಥಾಪಿಸಿರುವ ಈ ಪ್ರಶಸ್ತಿ 20 ಸಾವಿರ ಡಾಲರ್ ನಗದು ಹಾಗೂ ಫಲಕವನ್ನೊಳಗೊಂಡಿರುತ್ತದೆ. ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Write A Comment