ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವ ಅಭ್ಯುದಯ ಉಪಸಮಿತಿಯು ಬಿಲ್ಲವರ ಯುವ ಉತ್ಸವವನ್ನು ನ. 15ರಂದು ಸಾಂತಾಕ್ರೂಜ್ (ಪೂ.) ಬಿಲ್ಲವರ ಭವನದಲ್ಲಿ ಆಯೋಜಿಸಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತ್ ಬ್ಯಾಂಕಿನ ಕಾರ್ಯಾ ಧ್ಯಕ್ಷ ಮತ್ತು ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಅವರು ಅಸೋಸಿಯೇ ಶನ್ ಪ್ರಾರಂಭದ ದಿನದಿಂದಲೂ ಸಮಾ ಜದ ಭಾಂದವರ ಏಳಿಗೆಗಾಗಿ ದುಡಿ ಯುತ್ತಿದ್ದು, ನಮ್ಮ ಹಿರಿಯರು ಸಂಘ ಟನೆಯನ್ನು ಬೆಳೆಸುವಲ್ಲಿ ಅಪಾರ ಶ್ರಮ ಪಟ್ಟರಲ್ಲದೆ, ತ್ಯಾಗಮಯಿ ಜೀವನ ನಡೆಸಿದ್ದಾರೆ. ಹಿರಿಯರ ತ್ಯಾಗ ಪರಿಶ್ರಮ ಇಂದಿನ ಸಮಾಜದ ಯುವ ಜನಾಂಗಕ್ಕೆ ಪ್ರೇರಣೆ ನೀಡಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾ ನಂದ ಡಿ. ಕೋಟ್ಯಾನ್ ಮಾತನಾಡಿ, ಯುವಕರು ಸಂಘಟನೆಯಲ್ಲಿ ತೊಡಗಿ ಕೊಳ್ಳಲು ಇಂತಹ ಕಾರ್ಯಕ್ರಮ ಪ್ರೇರಣಿ ನೀಡಲಿ. ಅಸೋಸಿಯೇಶನ್‌ಗೆ ಯುವ ಶಕ್ತಿ ಸೇರಿಕೊಂಡಾಗ, ಸಂಘ ಟನೆಗೆ ಮತ್ತಷ್ಟು ಬಲ ಬರುತ್ತದೆ. ಸಮಾಜದ ಪ್ರತಿಭೆಗಳ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ವೇದಿಕೆ ನಿರ್ಮಿಸಲಿ ಎಂದು ಹಾರೈಸಿದರು.
ಯುವ ಉತ್ಸವದಲ್ಲಿ ತುಳುನಾಡಿನ ಆಚರಣೆ, ಸಂಸ್ಕೃತಿ ಹಾಗೂ ಸಾಮಾಜಿಕ ಪಿಡುಗಳ ಬಗ್ಗೆ ಜಾಗೃತಿ ಮೂಡಿಸುವ ನೃತ್ಯ ಮೆರುಗು ನೀಡಿದವು.
ನಮ್ಮ ಸಂಘಟನೆಯ ಹಿರಿಯರು ಜೀವನದಲ್ಲಿ ಈ ಮಟ್ಟಕ್ಕೆ ತಲು ಪಲು ಅಪಾರ ಶ್ರಮಪಟ್ಟಿದ್ದಾರೆ. ಅವರು ಸಂಘಟನೆಗಳಲ್ಲಿ ತೊಡಗಿ ಕೊಂಡು ಸಮಾಜ ಬಂಧುಗಳ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಅವರೆಲ್ಲರೊಂದಿಗೆ ಸಮಾಜದ ಯುವ ವರ್ಗ ಒಂದಾಗಬೇಕಿದೆ. ಯುವ ಅಭ್ಯುದಯ ಸಮಿತಿಯ ಎಲ್ಲ ಕಾರ್ಯಗಳು ಶ್ಲಾಘನೀಯ ಎಂದು ಭಾರತ್ ಬ್ಯಾಂಕಿನ ನಿರ್ದೇಶಕರಾದ ಕೆ. ಎನ್. ಸುವರ್ಣ ನುಡಿದರು.
ವೇದಿಕೆಯಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕರಾದ ಭಾಸ್ಕರ ಎಂ. ಸಾಲ್ಯಾನ್, ಗಂಗಾಧರ ಜೆ. ಪೂಜಾರಿ, ಸೂರ್ಯಕಾಂತ ಜೆ. ಸುವರ್ಣ ಹಾಗೂ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ರಾಜಾ ವಿ. ಸಾಲ್ಯಾನ್, ಶಂಕರ್ ಡಿ. ಪೂಜಾರಿ, ಡಾ| ಯು. ಧನಂಜಯ್ ಕುಮಾರ್,ಭಾಸ್ಕರ ಬಂಗೇರ, ಗೌ| ಕೋಶಾಧಿಕಾರಿ ಮಹೇಶ್ ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್ ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ಸ್ಥಳೀಯ ಸಮಿತಿಗಳು, ಕೇಂದ್ರ ಕಚೇರಿ, ಭಾರತ್ ಬ್ಯಾಂಕಿನ ಸಿಬಂದಿಯಿಂದ ನೃತ್ಯ, ಹಾಸ್ಯ ಪ್ರಹಸನ ಜರಗಿತು.
ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಿತೀಶ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿದರು. ಅಸೋಸಿಯೇಶನ್‌ನ ಜತೆ ಕಾರ್ಯದರ್ಶಿ ಧನಂಜಯ್ ಕೋಟ್ಯಾನ್ ನಿರೂಪಿಸಿದರು. ಯುವ ಅಭ್ಯುದಯ ಸಮಿತಿಯ ಗೌ| ಕಾರ್ಯ ದರ್ಶಿ ಉಮೇಶ್ ಎನ್. ಕೋಟ್ಯಾನ್ ವಂದಿಸಿದರು.



