ಅಬುಧಾಬಿ,ನ.11: ದಕ್ಷಿಣ ಭಾರತದ 8 ಪುಣ್ಯ ಕ್ಷೇತ್ರಗಳ ಇತಿಹಾಸ ಮತ್ತು ಮಹಿಮೆಯನ್ನು ಸಾರುವ ಕನ್ನಡ ಭಕ್ತಿಗೀತೆಗಳ ಧ್ವನಿಸುರುಳಿ “ಅಷ್ಟ ಕ್ಷೇತ್ರ ಗಾನ ವೈಭವ”ವನ್ನು ಖ್ಯಾತ ಅನಿವಾಸಿ ಉದ್ಯಮಿ ಪದ್ಮಶ್ರೀ ಪುರಸ್ಕøತ ಡಾ.ಬಿ.ಆರ್. ಶೆಟ್ಟಿ ಅವರು ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.
ಈ ಧ್ವನಿ ಸುರುಳಿಯು ಒಟ್ಟು 8 ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು ಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಮತ್ತು ಸುರೇಖಾ ಕೆ.ಎಸ್ ಹಾಡಿರುವ ಈ ಭಕ್ತಿಗೀತೆಗಳಿಗೆ ಸಾಹಿತ್ಯ ನೀಡಿರುವವರು ಪುತ್ತೂರು ಉಮೇಶ್ ನಾಯಕ್. ಜನ್ಮ ಕ್ರಿಯೇಷನ್ಸ್ ಮೂಲಕ ಡಾ.ಹರ್ಷಕುಮಾರ ರೈ ಈ ಧ್ವನಿ ಸುರುಳಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಈ ಸಂದರ್ಭ ಯುಎಇ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಹಾಗೂ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಉಪಸ್ಥಿತದ್ಧರು.
