ಕರ್ನಾಟಕ

ದಲಿತರನ್ನು ನಾಯಿಗೆ ಹೋಲಿಸಿದ ಕೇಂದ್ರ ಸಚಿವ ವಿ.ಕೆ. ಸಿಂಗ್ ಸಚಿವ ಸಂಪುಟದಲ್ಲಿ ಇರಲು ಅರ್ಹರಲ್ಲ: ತಮ್ಮದೇ ಪಕ್ಷದ ಕೇಂದ್ರ ಸಚಿವರ ವಿರುದ್ಧ ಕಿಡಿಕಾರಿದ ಗೋವಿಂದ ಕಾರಜೋಳ

Pinterest LinkedIn Tumblr

govind-karjol1

ಹುಬ್ಬಳ್ಳಿ/ಹಾವೇರಿ: ದಲಿತರನ್ನು ನಾಯಿಗೆ ಹೋಲಿಸಿದ ಕೇಂದ್ರ ಸಚಿವ ವಿ.ಕೆ. ಸಿಂಗ್ ಸಚಿವ ಸಂಪುಟದಲ್ಲಿ ಇರಲು ಅರ್ಹರಲ್ಲ. ಅವರು ರಾಜಕೀಯದಿಂದಲೇ ದೂರಉಳಿಯುವುದು ಒಳ್ಳೆಯದು ಎಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ತಮ್ಮದೇ ಪಕ್ಷದ ಕೇಂದ್ರ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಬುಧವಾರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನನ್ನು ಮನುಷ್ಯನನ್ನಾಗಿ ನೋಡದವರು ರಾಜಕಾರಣದಲ್ಲಿ ಇರಬಾರದು ಎಂದರು. ದಲಿತ ಪ್ರಧಾನಿ ಬಗ್ಗೆ ಪ್ರಶ್ನೆ ಎದುರಾದಾಗಲೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸರದಿ ಬಂದಾಗ ಕೇಂದ್ರದಲ್ಲೂ ದಲಿತರು ಪ್ರಧಾನಿಯಾಗುತ್ತಾರೆ. ದೇಶಕ್ಕೆ ಅಮೂಲ್ಯವಾದ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನೇ ಸೋಲಿಸುವ ನೀಚ ಕೆಲಸ ಮಾಡಿದ ಕಾಂಗ್ರೆಸ್‍ಗೆ ದಲಿತರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

ಅಹಿಂದ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದಲಿತರಿಗೆ ಸೌಲಭ್ಯ ನೀಡದೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

Write A Comment