ಮಂಗಳೂರು: ಮೂಡಬಿದಿರೆಯಲ್ಲಿ ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣವನ್ನು ಸರ್ಕಾರ ಸಿಬಿಐಗೆ ಒಪ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ್ ಕೋಟ್ಯಾನ್ ಒತ್ತಾಯಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳಿಂದ ನಿರಂತವಾಗಿ ಹಿಂದೂ ಕಾರ್ಯಕರ್ತರು, ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಆದರೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಳ್ಳದೆ, ಮೌನವಾಗಿ ಇರುವ ಮೂಲಕ ಇಂತಹ ಹಲ್ಲೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಆರೋಪಿಸಿದರು.
ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಘಟನೆಗೆ 45 ಲಕ್ಷ ರೂ. ಪರಿಹಾರ ನೀಡಿದಂತೆ ಇಲ್ಲಿಯೂ ಪ್ರಶಾಂತ್ ಕುಟುಂಬಕ್ಕೂ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಸಂಬಂಧ ಸಚಿವ ಅಭಯಚಂದ್ರ ಜೈನ್ಗೆ ಅಂತಾರಾಷ್ಟ್ರೀಯ ಬೆದರಿಕೆ ಕರೆ ಬಂದಿದೆ ಎಂಬುವುದು ತನಿಖೆಯನ್ನು ದಿಕ್ಕು ತಪ್ಪಿಸುವ ಹುನ್ನಾರ ಹಾಗೂ ಸಚಿವರ ಜೊತೆ ಆರೋಪಿಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ.
ಮೂಡಬಿದ್ರೆಯಲ್ಲಿ ಪ್ರಶಾಂತ್ ಕೊಲೆ, ಹಂಡೇಲುನಲ್ಲಿ ಅಶೋಕ್ ಪೂಜಾರಿ ಮತ್ತು ಯೋಗೀಶ್ ಅಚಾರ್ಯ, ಪೆರ್ಮುದೆಯಲ್ಲಿ ನಡೆದ ಹಿಂದೂ ಯುವಕನ ಕೊಲೆ ಯತ್ನ ಹೀಗೆ ಹಲವಾರು ಪ್ರಕರಣಗಳು.
ಮೂಡಬಿದ್ರೆಯಲ್ಲಿ ಕೊಲೆಗಡುಕರಿಗೆ ಬಲಿಯಾದ ಪ್ರಶಾಂತನ ಮನೆಗೆ ಪೋಲಿಸ್ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಮೃತನ ತಂದೆ, ತಾಯಿಗೆ ಸಾಂತ್ವಾನದ ಮಾತು ಹೇಳಲು ಯಾಕೆ ಹೋಗಿಲ್ಲ? ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸಮಯದಿಂದ ಹಿಂದೂ ಸಂಘನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಮತ್ತು ಕೊಲೆ ಇವುಗಳ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಚಕಾರವೆತ್ತದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೇಳಿದ ಅವರು ಅದಕ್ಕೆ ಸಂಬಂಧ ಪಟ್ಟಂತೆ ಈ ಕೆಳಗಿನ ಉದಾಹರಣೆ ನೀಡಿದರು.
1. ಪತ್ರಿಕೆಯೊಂದು ಈ ಕೊಲೆಗೂ ದಾವೂದ್ ಇಬ್ರಾಹಿಂ ಮತ್ತು ಐ.ಎಸ್.ಐ. ನಂಟಿರುವ ಬಗ್ಗೆ ವರದಿ ಮಾಡಿದೆ.
2. ಅಭಯಚಂದ್ರ ಜೈನ್ರಿಗೆ ಅಂತರರಾಷ್ಟ್ರೀಯ ಬೆದರಿಕೆ ಕರೆ ಬಂದಿರುವುದು – ತನಿಖೆಯನ್ನು ದಿಕ್ಕು ತಪ್ಪಿಸುವ ಯತ್ನ.
3. Time Now ರಾಷ್ಟ್ರೀಯ ಪ್ರಮುಖ ವಾಹಿನಿಯಲ್ಲಿ ಆರೋಪಿಗಳ ಜೊತೆ ಸಚಿವರಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುತ್ತದೆ.
4. N.I.A.(National Investigation Agency ಮಂಗಳೂರಿನಲ್ಲಿ ಪಾಕಿಸ್ತಾನ ಮೂಲಕ ಐ.ಎಸ್.ಐ. ನ Sleeper Cell ಕಾರ್ಯ ನಿರ್ವಹಿಸುತ್ತಿರುವುದು ವರದಿ ಮಾಡಿದೆ.
5. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆದ ಘಟನೆಗಳು ಪಾಕಿಸ್ತಾನದ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದು ಇದಕ್ಕೆ ಪುಷ್ಠಿ ನೀಡಿರುತ್ತದೆ.
6. ಜಿಲ್ಲೆಯ ಜನರ ಭದ್ರತೆಯ ದೃಷ್ಠಿಯಿಂದ ಈ ಕೂಡಲೇ ಸಚಿವ ಅಭಯಚಂದ್ರ ಜೈನ್ರವರು ರಾಜಿನಾಮೆ ನೀಡಿ, ಸಿ.ಬಿ.ಐ. ತನಿಖೆಗೆ ಒಳಪಡಿಸಬೇಕು.
7. ಕಲ್ಬುರ್ಗಿ ಘಟನೆಯನ್ನು ೨೪ ಗಂಟೆಯೊಳಗೆ ಸಿ.ಬಿ.ಐ.ಗೆ ನೀಡಿದ್ದಾರೆ.
8. ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಘಟನೆಗೆ ೪೫ ಲಕ್ಷ ರೂಪಾಯಿ ಪರಿಹಾರ ನೀಡಿದಂತೆ ಇಲ್ಲಿಯೂ ಕನಿಷ್ಠ ರೂಪಾಯಿ ೨೫ ಲಕ್ಷ ಪರಿಹಾರ ನೀಡಬೇಕು.
9. ಅಶೋಕ್ ಪೂಜಾರಿ ಒಂದು ಕೈ ಕಳಕೊಂಡು ಚೇತರಿಸಿಕೊಳ್ಳುತ್ತಿದ್ದರೂ, ಈವರೆಗೆ ಆಸ್ಪತ್ರೆಯಲ್ಲಿ ಖರ್ಚಾಗಿರುವ ಸುಮಾರು ೩ ಲಕ್ಷ ರೂಪಾಯಿಯನ್ನು ರಾಜ್ಯ ಸರ್ಕಾರ ಈ ಕೂಡಲೇ ಭರಿಸಬೇಕು. ಅಲ್ಲದೆ ಅವನಿಗೆ ಸರ್ಕಾರಿ ಕೆಲಸ ಕೊಡಿಸಿ ಹೆಚ್ಚಿನ ಪರಿಹಾರ ಒದಗಿಸಬೇಕು.
10. ಸಚಿವರಿಗೂ ವಿದೇಶದಿಂದ ಈ ಕೇಸಿನ ಬಗ್ಗೆ ಬೆದರಿಕೆ ಕರೆ ಬಂದಿರುವುದರಿಂದ ಇದನ್ನು ಸಿ.ಬಿ.ಐ.ಗೆ ನೀಡಿ ಇಂಟರ್ ಪೋಲ್ ಮೂಲಕ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಸುಚರಿತ ಶೆಟ್ಟಿ, ಕಸ್ತೂರಿ ಪಂಜ, ರಘುರಾಮ್, ರವಿಶಂಕರ್ ಮಿಜಾರ್ ಮುಂತಾದವರು ಉಪಸ್ಥಿತರಿದ್ದರು.




