ರಾಷ್ಟ್ರೀಯ

ಮಿಜೋರಾಂನಲ್ಲಿ ಬಸ್‌ ಅಪಘಾತ:  11ಜನ ಸಾವು

Pinterest LinkedIn Tumblr

bussಐಜ್ವಾಲಾ: ಮಿಜೋರಾಮ ರಾಜ್ಯದಲ್ಲಿ ಕಡಿದಾದದ ಕಂದಕಕ್ಕೆ ಬಸ್‌ ಉರುಳಿ ಬಿದ್ದ ಪರಿಣಾಮ 11 ಜನ ಪ್ರಯಾಣಿಕರು ಮೃತಪಟ್ಟು 21 ಜನ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಇಂದು ಬೆಳಗ್ಗೆ ಸುಮಾರು 30 ಪ್ರಯಾಣಿಕರಿದ್ದ  ಬಸ್‌ ಐಜ್ವಾಲ್‌ನಿಂದ  ಲಾಂಗಿತಲೈ  ಜಿಲ್ಲೆಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ರಾಮ್‌ಲೈತುಹಿ ಹಳ್ಳಿಯ ಸಮೀಪದಲ್ಲಿರುವ ಕಂದಕಕ್ಕೆ ಬಸ್‌ ಉರುಳಿ ಬಿದ್ದಿದೆ. ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment