ಮುಂಬೈ

ಮುಂಬೈ ಕ್ರಾಫರ್ಡ್ ಮಾರುಕಟ್ಟೆಯಲ್ಲಿ ಬೆಂಕಿ: 100ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

Pinterest LinkedIn Tumblr

mumbai-market-fireಮುಂಬೈ: ಮುಂಬೈನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಕ್ರಾಫರ್ಡ್ ಮಾರುಕಟ್ಟೆಯಲ್ಲಿ ಭಾನುವಾರ ಬೆಳಗ್ಗೆ 5.19 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 100ಕ್ಕೂ ಹೆಚ್ಚು ಅಂಗಡಿಗಳು ಭಸ್ಮಗೊಂಡಿರುವುದಾಗಿ ತಿಳಿದುಬಂದಿದೆ.

ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ 100ಕ್ಕೂ ಹೆಚ್ಚು ಮಳಿಗೆಗಳು ಅಗ್ನಿಗಾಹುತಿಯಾಗಿದ್ದು, ಸಂಪೂರ್ಣವಾಗಿ ಭಸ್ಮವಾಗಿವೆ. ಇದೀಗ ಸ್ಥಳಕ್ಕೆ 10 ಅಗ್ನಿ ಶಾಮಕ ವಾಹನಗಳು ಹಾಗೂ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿವೆ.

ಅಗ್ನಿ ಆಕಸ್ಮಿಕಕ್ಕೆ ಈವರೆಗೂ ಯಾವುದೇ ಕಾರಣಗಳು ತಿಳಿದುಬಂದಿಲ್ಲ. ಘಟನೆವೇಳೆ ಸಾವು-ನೋವು ಸಂಭವಿಸಿರುವ ಕುರಿತಂತೆ ಮಾಹಿತಿಗಳಿಲ್ಲ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬಿಎಂಸಿ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

 

Write A Comment