ಕರಾಚಿ, ಅ.25: ಕಳೆದ 15 ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿ ಹಿಂತಿರುಗಲಾರದೇ ಪರಿತಪಿಸುತ್ತಿದ್ದ 23ರ ಹರೆಯದ ಮೂಕ, ಕಿವುಡ ಯುವತಿ ಗೀತಾ ಇತ್ತೀಚೆಗೆ ತನ್ನ ಕುಟುಂಬವನ್ನು ಗುರುತಿಸಲು ಯಶಸ್ವಿಯಾದ ಬಳಿಕ ಆಕೆ ನಾಳೆ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿದ್ದಾಳೆ.
ಗೀತಾಳಿಗೆ ಇಸ್ಲಾಮಾಬಾದ್ನಲ್ಲಿರುವ ಭಾರತ ರಾಯಭಾರಿ ಕಚೇರಿ ಮೂಲಕ ಆಕೆಯ ತಂದೆ, ಮಲ ತಾಯಿ ಮತ್ತು ಸಹೋದರ, ಸಹೋದರಿಯರ ಭಾವಚಿತ್ರವನ್ನು ಕಳುಹಿಸಲಾಗಿತ್ತು. ಬಿಹಾರ್ ನಿವಾಸಿಗಳಾಗಿರುವ ಅವರೆಲ್ಲರನ್ನು ಆಕೆ ಗುರುತಿಸಿದ್ದಳು.
ಗೀತಾಳನ್ನು ಕರೆದುಕೊಂಡು ಬರುವ ಎಲ್ಲಾ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಮುಗಿದಿದ್ದು ಆಕೆಯನ್ನು ನಾಳೆ ಭಾರತಕ್ಕೆ ಮರಳಿ ಬರಲಿದ್ದಾಳೆ ಎಂದು ವರದಿ ತಿಳಿಸಿದೆ. ಈಗ 21 ವರ್ಷ ಪ್ರಾಯದವಳಾಗಿರುವ ಗೀತಾ ಕಳೆದ 13 ವರ್ಷಗಳ ಗೀತಾ ಆಕಸ್ಮಿಕವಾಗಿ ಅಮೃತಸರದಿಂದ ರೈಲು ಹತ್ತಿ ಲಾಹೋರ್ ತಲುಪಿದ್ದಳು. ಲಾಹೋರ್ ನಿಲ್ದಾಣದಲ್ಲಿ ಅಳುತ್ತಿದ್ದ ಅವಳನ್ನು ಪಾಕ್ ಅಧಿಕಾರಿಗಳು ಆಶ್ರಯಧಾಮಕ್ಕೆ ಕಳುಹಿಸಿದ್ದರು. ಆಕೆಗೆ ಮಾತು ಬರುತ್ತಿರಲಿಲ್ಲ ಮತ್ತು ಕಿವಿ ಕೇಳಿಸುತ್ತಿರಲಿಲ್ಲವಾದ್ದರಿಂದ ಆಕೆಯಿಂದ ಯಾವುದೇ ಮಾಹಿತಿ ಲಭಿಸಿರಲಿಲ್ಲ. ಇದೀಗ 15 ವರ್ಷದ ನಂತರ ಆಕೆಯನ್ನು ಕೇಂದ್ರ ಸರಕಾರ ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದೆ.ಸಲ್ಮಾನ್ ಅಭಿನಯದ ಭಜರಂಗಿ ಭಾಯಿಜಾನ್ ತೆರೆ ಕಂಡ ಬಳಿಕ ಆಕೆ ಮತ್ತೂ ಹೆಚ್ಚು ಪ್ರಚಾರ ಪಡೆದುಕೊಂಡಿದ್ದಳು.
