ರಾಷ್ಟ್ರೀಯ

ಹತಾಶೆಯಿಂದಾಗಿ ಪಾಕ್ ಸೇನೆ ಭಾರತದತ್ತ ಗುಂಡಿನ ದಾಳಿ ನಡೆಸುತ್ತಿದೆ: ನಖ್ವಿ

Pinterest LinkedIn Tumblr

Naqviಅಲಹಾಬಾದ್: ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದತ್ತ ಗುಂಡಿನ ದಾಳಿ ನಡೆಸುತ್ತಿರುವುದು ಪಾಕಿಸ್ತಾನದ ಹತಾಶೆಯನ್ನು ಸೂಚಿಸುತ್ತದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

ಭಾರತ ಶಾಂತಿಯ ಮಂತ್ರ ಪಠಿಸುತ್ತದೆ. ಆದರೆ ಪಾಕಿಸ್ತಾನ ಭಯೋತ್ಪಾದನೆಯೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ಶಾಂತಿ ಮತ್ತು ಭಯೋತ್ಪಾದನೆ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಎಂದು ನಖ್ವಿ ಹೇಳಿದ್ದಾರೆ.

ಅಲ್ಲದೆ ಪಾಕಿಸ್ತಾನ ಭಯೋತ್ಪಾದಕರನ್ನು ನಿರ್ಮಿಸುವ ಕಾರ್ಖಾನೆಯಾಗಿದೆ. ಇದರಿಂದಾಗಿಯೇ ಪಾಕ್ ನಲ್ಲಿ ವಿಘಟನೆಗಳು ನಡೆಯುತ್ತಿವೆ ಎಂದರು.

ಪಾಕಿಸ್ತಾನ ಸೇನೆ ನಡೆಸುತ್ತಿರುವ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಸಹ ತಕ್ಕ ಉತ್ತರ ನೀಡುತ್ತಿದೆ ಎಂದು ನಖ್ವಿ ಹೇಳಿದ್ದಾರೆ.

Write A Comment