ಉಡುಪಿ: ಸಮುದ್ರ ಹಾಗೂ ನದಿಯ ಸಂಗಮದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಗುರುವಾರ ಸಂಜೆ ಸುಮಾರಿಗೆ ಕೆಮ್ಮಣ್ಣಿನ ಕೋಡಿ ಬೆಂಗ್ರೆಯಲ್ಲಿ ಘಟಿಸಿದೆ.
ಒಟ್ಟು ನಾಲ್ಕು ಮಂದಿ ಯುವಕರು ಈಜಲು ಬಂದಿದ್ದು ಇಬ್ಬರು ಜೀವಾಪಾಯದಿಂದ ಪಾರಾಗಿದ್ದಾರೆ. ಇವರುಉದ್ಯಾವರ ಟೋಯೊಟಾ ಶೋ ರೂಮ್ ನಲ್ಲಿನ ಕಾರ್ಮಿಕರಾಗಿದ್ದಾರೆ. ನೀರುಪಾಲಾದವರಲ್ಲಿ ಪ್ರದೀಪ್ ಕೋಟ್ಯಾನ್ (23) ಟೆಕ್ನೀಷಿಯನ್ ಹಾಗೂ ಪ್ರಮೋದ್ (23) ಪೈಂಟರ್ ಕಾರ್ಮಿಕರಾಗಿದ್ದರು. ಇವರ ಬಟ್ಟೆ, ಪರ್ಸ್, ಮೊಬೈಲ್ ಗಳು ಸಮುದ್ರದದಡದಲ್ಲಿಯೇ ಇವೆ.ಉಡುಪಿಯ ಪಿತ್ರೋಡಿ ನಿವಾಸಿಗಳೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಹಾಗೂ ಈಜುಪಟುಗಳು ಶವದ ಶೋಧ ಕಾರ್ಯದಲಿ ತೊಡಗಿದ್ದು ಪ್ರದೀಪ್ ಅವರ ಶವ ದೊರೆತಿದ್ದು ಪ್ರಮೋಧ್ ಶವಕ್ಕಾಗಿ ಶೋಧ ಕಾರ್ಯ ಶುಕ್ರವಾರ ಬೆಳೆಗ್ಗೆಯೂ ನಡೆಯುತ್ತಿದ್ದು ಶುಕ್ರವಾರ ಮಧ್ಯಾಹ್ನದ ಬಳಿಕ ಪ್ರಮೋದ್ ಶವವೂ ಪತ್ತೆಯಾಗಿದೆ.
