ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾಗಿ 90 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ದೇಶದ ಸೇವೆಯಲ್ಲಿ 90 ವರ್ಷ ಪೂರೈಸಿದ ಆರೆಸ್ಸೆಸ್ ಸಂಸ್ಥೆಯ ಸ್ವಯಂ ಸೇವಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಪಕ್ಷದ ಮಾರ್ಗದರ್ಶಿ ಸಂಸ್ಥೆಯಾದ ಆರೆಸ್ಸೆಸ್, ಸಾಮಾಜಿಕ ಸಂಸ್ಥೆಯಾಗಿ 1925 ರ ಸೆಪ್ಟೆಂಬರ್ 27 ರಂದು ವಿಜಯದಶಮಿ ಹಬ್ಬದ ದಿನದಂದು ಸ್ಥಾಪಿಸಲಾಗಿತ್ತು. ಹಿಂದು ಸಮುದಾಯದ ಏಕತೆಗೆ ಮತ್ತು ಹಿಂದು ಶಿಸ್ತಿನ ಕುರಿತಂತೆ ತರಬೇತಿ ನೀಡುವುದು ಸಾಮಾಜಿಕ ಸಂಸ್ಥೆಯ ಗುರಿ ಎಂದು ಆರೆಸ್ಸೆಸ್ ನಾಯಕರು ಹೇಳಿಕೆ ನೀಡಿದ್ದರು.
ಹಿಂದು ಮೌಲ್ಯಗಳನ್ನು ಎತ್ತಿಹಿಡಿಯುವುದಕ್ಕಾಗಿ ಮೀಸಲಾದ ಸಾಂಸ್ಕ್ರತಿಕ ಸಂಘಟನೆ ಎಂದು ಆರೆಸ್ಸೆಸ್ ತನ್ನನ್ನು ತಾನು ವರ್ಣಿಸಿಕೊಳ್ಳುತ್ತದೆ.