ಕನ್ನಡ ವಾರ್ತೆಗಳು

ಕುದ್ರೋಳಿ ಶ್ರೀ ಕ್ಷೇತ್ರ : ಮಂಗಳೂರು ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

Pinterest LinkedIn Tumblr

Kudroli_Culture_Inugrat_1

ಮಂಗಳೂರು : ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಬುಧವಾರ ಕರ್ನಾಟಕ ಬ್ಯಾಂಕ್ ಚೇಯರ್‌ಮಾನ್ ಪಿ. ಜಯರಾಮ್ ಭಟ್ ಮತ್ತು ಅವರ ಪತ್ನಿ ಶ್ರೀಮತಿ ಶುಭಾ ಜಯರಾಮ್ ಭಟ್‌ರವರು ದೀಪ ಬೆಳಗಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು.

Kudroli_Culture_Inugrat_2

ಶ್ರೀ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸಾಯಿರಾಮ್, ಖಜಾಂಜಿ ಶ್ರೀ ಪದ್ಮರಾಜ್ ಆರ್ (ಎಡ್ವೊಕೇಟ್), ಆಡಳಿತ ಸದಸ್ಯರಾದ ಶ್ರೀ ಮಹೇಶ್ಚಂದ್ರ ಹಾಗೂ ಶ್ರೀ ಕ್ಷೇತ್ರದ ಅಭಿವೃದ್ದಿ ಸಮಿತಿಯ ಸದಸ್ಯರುಗಳಾದ ಶ್ರೀ.ಹರಿಕೃಷ್ಣ ಬಂಟ್ವಾಳ್, ಶ್ರೀ ರಮಾನಾಥ ಕಾರಂದೂರು, ಡಾ. ಬಿ.ಜಿ.ಸುವರ್ಣ, ಶ್ರೀ.ದೇವೇಂದ್ರ ಪೂಜಾರಿ, ಶ್ರೀ.ಲೀಲಾಕ್ಷ ಕರ್ಕೇರ, ಡಾ. ಅನಸೂಯ ಬಿ.ಟಿ.ಸಾಲ್ಯಾನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment