ರಾಷ್ಟ್ರೀಯ

ನಿತೀಶ್ ಕುಮಾರ್ ಎರಡನೇ ಮದುವೆಯಾಗ ಹೊರಟಿದ್ದಾರೆ, ಆದರೆ ಹೂಮಾಲೆ ಹಾಕಲು ವಧು ಇಲ್ಲ!

Pinterest LinkedIn Tumblr

mಪಾಟ್ನಾ: ನಿತೀಶ್ ಕುಮಾರ್ ತಮ್ಮ ಮೈತ್ರಿಕೂಟದ ಮದುಮಗ ಎಂದು ಹೇಳಿಕೊಂಡಿರುವ ಮಹಾಮೈತ್ರಿಕೂಟಕ್ಕೆ ಬಿಜೆಪಿ, ಜೆಡಿಯು ನಾಯಕ ಎರಡನೆಯ ಮದುವೆಯಾಗ ಹೊರಟಿದ್ದಾರೆ. ಆದರೆ ಅವರ ಕೊರಳಿಗೆ ಹಾರ ಹಾಕಲು ವಧುವೇ ಇಲ್ಲ ಎಂದು ವ್ಯಂಗ್ಯವಾಡಿದೆ.

ನಿತೀಶ್ ಕುಮಾರ್ ಮರು ಮದುವೆಯಾಗುತ್ತಿದ್ದಾರೆ. ಆದರೆ ಎರಡನೆಯ ಮದುವೆಯಾಗಲು ಹೊರಟಿರುವ ವರನನ್ನು ವರಿಸಲು ಯಾವ ಹುಡುಗಿ ಕೂಡ ಬಯಸಲಾರಳು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಕಿಚಾಯಿಸಿದ್ದಾರೆ.

ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದಕ್ಕೆ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ 17 ವರ್ಷಗಳ ಸಂಬಂಧವನ್ನು ಮುರಿದುಕೊಂಡರು ಎಂದು ಅವರು ಆರೋಪಿಸಿದ್ದಾರೆ

‘ತಮ್ಮ ಮಹಾ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಅವರೇ ಮದುಮಗ. ಆದರೆ ಎನ್‌ಡಿಎ ಯಾರನ್ನು ಹೊಂದಿಲ್ಲ’, ಎಂದು ಲಾಲು ಕುಹಕವಾಡಿದ್ದರ ಹಿನ್ನೆಲೆಯಲ್ಲಿ ಸುಶೀಲ್ ಕುಮಾರ್ ಮೋದಿ ಈ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.

ಜೆಡಿ(ಯು), ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿವೆ. ಆದರೆ ಪ್ರಧಾನಿ ಮೋದಿ ಹೆಸರಿನಲ್ಲಿ ಕಣಕ್ಕಿಳಿದಿರುವ ಎನ್‌ಡಿಎ ತಮ್ಮ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ.

Write A Comment