ರಾಷ್ಟ್ರೀಯ

ಬಿಜೆಪಿ ಅಭಿವೃದ್ಧಿ ಮುಖವಾಡ ಧರಿಸಿ ಕೋಮುವಾದ ಹರಡುತ್ತಿದೆ: ನಿತೀಶ್ ಕುಮಾರ್

Pinterest LinkedIn Tumblr

n-fiಪಾಟ್ನಾ: ಅಭಿವೃದ್ಧಿ ಎನ್ನುವುದು ಬಿಜೆಪಿಯ ಮುಖವಾಡದಂತೆ. ಅದರ, ನಿಜವಾದ ಉದ್ದೇಶ ಕೋಮುವಾದವಾಗಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ದಾದ್ರಿ ಹತ್ಯೆಯಾಗಲಿ ಅಥವಾ ಎಂ.ಎಂ.ಕಲಬುರ್ಗಿ ಹತ್ಯೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಾಗಿರುವುದು ಕೋಮುವಾದಕ್ಕೆ ಪುಷ್ಠಿ ನೀಡುತ್ತದೆ ಎಂದು ಜೆಡಿಯು ಆರೋಪಿಸಿದೆ.

ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಪರ ಮಾತನಾಡುತ್ತಾರೆ. ಅದರೆ, ದೇಶದಲ್ಲಿ ಕೋಮುವಾದವನ್ನು ಹರಡಿಸುವುದೇ ಬಿಜೆಪಿಯ ಪ್ರಮುಖ ಗುರಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿಯನ್ನು ಚುನಾವಣೆ ವಿಷಯವನ್ನಿಟ್ಟುಕೊಂಡು ಕಣಕ್ಕಿಳಿಯಲಾಗಿದೆ. ಕಳೆದ 2014ರ ಲೋಕಸಭೆ ಚುನಾವಣೆ ಮೋದಿ ಪರವಾಗಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಚುನಾವಣೆ ನಾನು ಮುಖ್ಯಮಂತ್ರಿಯಾದ ಮೇಲೆ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪ್ರತಿಬಿಂಬವಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಬಿಜೆಪಿ ನಾಯಕರು ನಡೆಸುತ್ತಿರುವ ಕುಕೃತ್ಯಗಳ ಬಗ್ಗೆ ಧ್ವನಿ ಎತ್ತುವುದಿಲ್ಲ ಮೌನವಾಗಿರುತ್ತಾರೆ. ಪ್ರಧಾನಿ ಮೋದಿ ಮೌನವಾಗಿರುವುದು ದೇಶಕ್ಕೆ ಅಪಾಯಕಾರಿ ಎಂದು ಬಿಹಾರ್ ಸಿಎಂ ನಿತೀಶ್ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

Write A Comment