ಕನ್ನಡ ವಾರ್ತೆಗಳು

ಮೆನೆಯವರಿಂದ ತಿರಸ್ಕರಿಲ್ಪಟ್ಟ ತಾಯಿ ಮತ್ತು ಮಗುವನ್ನು ರಕ್ಷಿಸಿದ ಚೈಲ್ಡ್‌ಲೈನ್ ಮಂಗಳೂರು.

Pinterest LinkedIn Tumblr

child

(ಸಾಂದರ್ಭಿಕ ಚಿತ್ರ)

ಮಂಗಳೂರು,ಅ.19 : ನಗರದ ಕೇಂದ್ರ ರೈಲ್ವೆ ನಿಲ್ದಾಣದ ಪರಿಸರದಿಂದ ಮನೆಯವರಿಂದ ತಿರಸ್ಕರಿಲ್ಪಟ್ಟ ತಾಯಿ ಮತ್ತು ಮಗುವನ್ನು ಚೈಲ್ಡ್‌ಲೈನ್ ಮಂಗಳೂರು-1098 ರಕ್ಷಿಸಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಶಗಿದೆ.

ಮೂಲತ ಕೇರಳ ಮೂಲದವರಾದ ಮಹಿಳೆ ತನ್ನ ೮ ವರ್ಷ ಮಗುವಿನೊಂದಿಗೆ ನಗರದಲ್ಲಿ ಹಲವು ದಿನಗಳಿಂದ ಭಿಕ್ಷೆ ಬೇಡುತ್ತ ಅಲೆದಾಡುತ್ತಿದ ಮಹಿಳೆಯನ್ನು ಗಮನಿಸಿದ ಹಿರಿಯರ ಸಹಾಯವಾಣಿ ಕಾರ್ಯಕರ್ತರೊಬ್ಬರು ಚೈಲ್ಡ್‌ಲೈನ್ ಮಂಗಳೂರು-1098 ಕ್ಕೆ ಮಾಹಿತಿಯನ್ನು ನಿಡಿರುತ್ತಾರೆ. ಅವರ ಮಾಹಿತಿಯಂತೆ ಚೈಲ್ಡ್‌ಲೈನ್-1098  ತುರ್ತು ಕಾರ್ಯಚರಣೆಯನ್ನು ಮಾಡಿ ತಾಯಿ ಮತ್ತು ಮಗುವನ್ನು ರಕ್ಷಿಸಿ ಮುಂದಿನ ರಕ್ಷಣೆ ಮತ್ತು ಪುರ್ನವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಸಮಿತಿಯ ಆದೇಶದ ಮೇರೆಗೆ ತಾಯಿ ಮತ್ತು ಮಗುವಿಗೆ ತಾತ್ಕಾಲಿಕ ಪುರ್ನವಸತುಯನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಯಿಯಲ್ಲಿ ಮಾತನಡಿಸಿದಾಗ ಮನೆಯವರು ಕುಟುಂಬದಿಂದ ದೂರ ತಳ್ಳಿರುವುದಾಗಿ ತಿಳಿಸಿರುತ್ತಾಳೆ.

ಚೈಲ್ಡ್‌ಲೈನ್ ಮಂಗಳೂರು-1098, ಕೇಂದ್ರ ಸಂಯೋಜನಾಧಿಕಾರಿಯಾದ ಸಂಪತ್ ಕಟ್ಟಿ ಇವರ ಮಾರ್ಗದರ್ಶನದಂತೆ ತಂಡ ಸದಸ್ಯರಾದ ಶ್ರೀಮತಿ ಅಸುಂತ ಡಿ’ಸೋಜ ಹಾಗೂ ಕು.ಪವಿತ್ರ ಜ್ಯೋತಿಗುಡ್ಡೆ ಇವರು ಕಾರ್ಯಚರಣೆ ಮಾಡಿ ತಾಯಿ ಮತ್ತು ಮಗುವನ್ನು ರಕ್ಷಿಸಿದರು.

Write A Comment