ಅಂತರಾಷ್ಟ್ರೀಯ

ಮಲಗುವ ವೇಳೆ ಗೊರಕೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಿರಾ….ಗೊರಕೆ ನಿಲ್ಲಿಸಲು ಇಲ್ಲಿದೆ ಟಿಪ್ಸ್ …

Pinterest LinkedIn Tumblr

gorake

ಎಂಥ ಸಂಗೀತಪ್ರಿಯರೂ ಗೊರಕೆಯ ಸದ್ದನ್ನು ಇಷ್ಟಪಡುವುದಿಲ್ಲ. ಈ ಗೊರಕೆ ನಮಗೆ ಗೊತ್ತಿಲ್ಲದೆ ಹೊರಹೊಮ್ಮುವ ಗಾಯನ! ದೇಹಕ್ಕೆ ವಯಸ್ಸಾದಂತೆ ಗಂಟಲಿನಲ್ಲಿ ಎಲುಬುಗಳು ಬಿಗಿ ಕಳೆದುಕೊಂಡು ಗಾಳಿಯ ದಾರಿ ಕಿರಿದುಗೊಳ್ಳುತ್ತದೆ. ಆಗ ಗೊರಕೆ ಉತ್ಪತ್ತಿಯಾಗುತ್ತದೆ.

ಗೊರಕೆಗೆ ಬ್ರೇಕ್ ಹಾಕಲು ಸಿಂಪಲ್ ಅಸ್ತ್ರಗಳಿವೆ. ಒಂದೇ ಬದಿಯಲ್ಲಿ ಮಲಗಿದರೆ ಗೊರಕೆ ಬರುವುದಿಲ್ಲ. ನಿಮಗೆ ಶೀತವಾಗಿ ಗೊರಕೆ ಬರುತ್ತಿದ್ದರೆ. ತಲೆ ದಿಂಬನ್ನು ಆದಷ್ಟು ಎತ್ತರಿಸಿ ಗೊರಕೆಯೂ ನಿಲ್ಲುತ್ತದೆ. ಶೀತವೂ ಕಡಿಮೆಯಾಗುತ್ತದೆ.

ಮಲಗುವ ಕೋಣೆಯಲ್ಲಿ ಶುದ್ಧ ಗಾಳಿಯಿದ್ದರೆ ಗೊರಕೆ ಹಾಜರಿ ಹಾಕುವುದಿಲ್ಲ. ದೇಹದಲ್ಲಿ ತೂಕ ಹೆಚ್ಚಿದಷ್ಟೂ ಮೂಗಿನಲ್ಲಿ ಕೊಬ್ಬು ಜಾಸ್ತಿ ಆಗುವುದೂ ಗೊರಕೆಗೆ ಕಾರಣವಾಗುತ್ತದೆ. ಹೀಗಾಗಿ ದೇಹತೂಕ ಇಳಿಸಿಕೊಂಡಾರೂ ಈ ರಾಗಕ್ಕೆ ಅಂತ್ಯ ಹಾಡಬಹುದು. ಧೂಮಪಾನ. ಮದ್ಯಪಾನ ಚಟಗಳನ್ನು ತ್ಯಜಿಸುವುದು ಒಳಿತು.

Write A Comment