ಬೆಂಗಳೂರು, ಅ.17: ಉತ್ತರ ದೆಹಲಿಯಲ್ಲಿ 4 ವರ್ಷದ ಹಸುಳೆಯ ಮೇಲೆ ಅತ್ಯಾಚಾರ ನಡೆದ ಘಟನೆ ಮಾಸುವ ಮೊದಲೇ ರಾಜಧಾನಿಯ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಮತ್ತಿಬ್ಬರು ಪುಟ್ಟ ಮಕ್ಕಳ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ದೆಹಲಿಯ ನಿಹಾಲ್ವಿಹಾರ್ನಲ್ಲಿ ಎg ಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ನಿನ್ನೆ ರಾತ್ರಿ ಅತ್ಯಾಚಾರ ನಡೆದಿದ್ದರೆ, ಪೂರ್ವ ದೆಹಲಿಯ ಆನಂದವಿಹಾರ್ನಲ್ಲಿ ಇಂದು 5 ವರ್ಷದ ಬಾಲಕಿ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೈಕ್ನಲ್ಲಿ ಬಂದಿದ್ದ ಇಬ್ಬರು ನಿನ್ನೆ ಸಂಜೆ ಎರಡೂವರೆ ವರ್ಷದ ಮಗುವನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸಮೀಪದ ಪಾರ್ಕ್ನಲ್ಲಿ ತೀವ್ರ ರಕ್ತಸ್ರಾವವಾಗಿ ಮಲಗಿದ್ದ ಮಗುವನ್ನು ಸಾರ್ವಜನಿಕರು, ಸಂಜಯ್ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆನಂದ್ ವಿಹಾರದಲ್ಲಿ 5 ವರ್ಷದ ಮಗುವನ್ನು ಕೂಡ ನಿನ್ನೆ ರಾತ್ರಿಯೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ದೇಹದ ಮೇಲೆಲ್ಲಾ ಗಾಯಗಳಾಗಿ ಬಿದ್ದಿದ್ದ ಮಗುವನ್ನು ಕಂಡ ಸಾರ್ವಜನಿಕರು ಆ ಮಗುವನ್ನು ಸಮೀಪದ ಜಿಟಿಬಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿನ ಚೀರಾಟ ಕೇಳಿ ಜಮಾಯಿಸಿದ ಜನ ಆರೋಪಿ ಗಳಾದ ಪ್ರಕಾಶ್, ರೇವತಿ ಹಾಗೂ ಸೀತಾರಾಮ್ ಎಂಬುವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳ ವಿರುದ್ಧ ಪೊರ್ಸೊಿ (ಪಿಒಸಿಎಸ್ಟಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಭೈರೋನ್ಸಿಂಗ್ ಗುಜ್ಖಾರ್ ಹೇಳಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜಧಾನಿಯಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದ್ದು, ಪ್ರಧಾನಿ ಮತ್ತು ಗವರ್ನರ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
