ಕನ್ನಡ ವಾರ್ತೆಗಳು

ಕುಂದಾಪುರ: ಅನ್ಯಕೋಮಿನ ಯುವಕರಿಂದ ದಲಿತರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ-ಮೂವರ ಬಂಧನ

Pinterest LinkedIn Tumblr

kandlur_Youths_Asualts.

ಕುಂದಾಪುರ: ಗೆಳೆಯನ ಮನೆಯಲ್ಲಿನ ಹಬ್ಬದ ಊಟವನ್ನು ಮುಗಿಸಿ ರಾತ್ರಿ ವೇಳೆ ಮನೆಗೆ ವಾಪಾಸ್ಸಾಗುತ್ತಿದ್ದ ದಲಿತ ಯುವಕರಿಬ್ಬರನ್ನು ತಡೆದ ಅನ್ಯಕೋಮಿನ ಗುಂಪೊಂದು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಘಟನೆ ಬುಧವಾರ ರಾತ್ರಿ ಕುಂದಾಪುರ ತಾಲೂಕಿನ ಕಂಡ್ಲೂರು ಎಂಬಲ್ಲಿ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಳ್ಕೂರು ನಿವಾಸಿಗಳಾದ ಮಂಜುನಾಥ (28) ಹಾಗೂ ವಿಜಯಕುಮಾರ್(30) ಎಂಬಿಬ್ಬರು ಹಲ್ಲೆಗೊಳಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಹೀದ್, ಮೊಹಮ್ಮದ್ ನದೀಮ್ ಹಾಗೂ ಮೊಹಮ್ಮದ್ ಸಬಾನ್ ಎನ್ನುವವರೇ ಬಂಧಿತರಾಗಿದ್ದು ಸದಾಕತ್ ಹಾಗೂ ಮುಶೀಮ್ ಎಂಬಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

Kandlur_Youths_Asualts (11)

Jpeg

Kandlur_Youths_Asualts (12) Kandlur_Youths_Asualts (4) Kandlur_Youths_Asualts (6) Kandlur_Youths_Asualts (14) Kandlur_Youths_Asualts (7) Kandlur_Youths_Asualts (13) Kandlur_Youths_Asualts (9) Kandlur_Youths_Asualts (8) Kandlur_Youths_Asualts (15) Kandlur_Youths_Asualts (3) Kandlur_Youths_Asualts (16) Kandlur_Youths_Asualts (5) Kandlur_Youths_Asualts (2) Kandlur_Youths_Asualts (1)

ಘಟನೆ ವಿವರ: ಮೂಲತಃ ಬಳ್ಕೂರಿನವರಾದ ಮಂಜುನಾಥ್ ಹಾಗೂ ವಿಜಯ್ ಎನ್ನುವವರು ತಮ್ಮ ಗೆಳೆಯನ ಮನೆ ಕಂದ್ಲೂರಿನ ಜನತಾಕಾಲೋನಿಗೆ ಹೊಸ್ತು ಹಾಗೂ ನವರಾತ್ರಿ ಹಬ್ಬದ ಊಟಕ್ಕಾಗಿ ರಾತ್ರಿ ತೆರಳಿದ್ದರು. 10.30ರ ಸುಮಾರಿಗೆ ಊಟ ಮುಗಿಸಿ ವಾಪಾಸ್ಸಾಗುತ್ತಿದ್ದ ವೇಳೆ ಬೈಕನ್ನು ಅಡ್ಡಗಟ್ಟಿದ್ದ ಹತ್ತಕ್ಕೂ ಅಧಿಕ ಜನರಿದ್ದ ತಂಡ ಇಬ್ಬರನ್ನು ನೆಲಕ್ಕೆ ಕೆಡವಿ ಅವ್ಯಾಚವಾಗಿ ಬೈಯುತ್ತಾ ಮನಬಂದಂತೆ ಥಳಿಸಿದ್ದಾರೆ ಅಲ್ಲದೇ ಮಾರಕಾಯುಧಗಳಿಂದ ಇಬ್ಬರ ಮೇಲೆಯೂ ಹಲ್ಲೆ ನಡೆಸಿದ್ದಾರೆ, ಹಲ್ಲೆಗೊಳಗಾದವರು ಹೇಳುವ ಪ್ರಕಾರ ಕಂಡ್ಲೂರಿನಲ್ಲಿ ಶಾರದೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ಮತ್ತು ಈ ಸಂಬಂಧ ಬ್ಯಾನರ್ ಅಳವಡಿಸಿದ ಕುರಿತು ಅನ್ಯಕೋಮಿನ ಯುವಕರು ಬೈದು ಮಾತನಾಡಿದ್ದರೆನ್ನಲಾಗಿದೆ ಅಲ್ಲದೇ ಕೊಲೆ ನಡೆಸುವ ಬೆದರಿಕೆಯನ್ನು ಹಾಕಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುತ್ತಿದ್ದ ಸಂದರ್ಭ ಅರಚಾಟ ಕೇಳಿ ಮಂಜುನಾಥ್ ಹಾಗೂ ವಿಜಯ್ ಅವರ ಸ್ನೇಹಿತರು ಆಗಮಿಸುವ ವೇಳೆಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದೇ ವೇಳೆ ಆಗಮಿಸಿದ ಪೊಲೀಸರು ಹಲ್ಲೆಗೊಳಗಾದವರ ಬಳಿ ಮಾಹಿತಿ ಪಡೆದು ಮೂವರು ಆರೋಪಿಗಳನ್ನು ಬಂಧಿಸಿದ್ದು ಇನ್ನಿಬ್ಬರನ್ನೊಳಗೊಂಡಂತೆ ಗುಂಪಿನಲ್ಲಿದ್ದರೆನ್ನಲಾದ ಇತರರ ಬಗ್ಗೆಯೂ ಮಾಹಿ ಕಲೆ ಹಾಕುತ್ತಿದ್ದಾರೆ. ವಿಜಯ್ ಸ್ಥಳೀಯವಾಗಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದು, ಮಂಜುನಾಥ್ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು ಎರಡು ವಾರಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಮಂಜುನಾಥ್ ಅವರಿಗೆ ಗಂಭೀರ ಗಾಯವಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಬಂಧನಕ್ಕೆ ಆಗ್ರಹ: ದಲಿತ ಯುವಕರಿಬ್ಬರು ಮನೆಗೆ ತೆರಳುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯದ ನೈಜ ಆರೋಪಿಗಳನ್ನು ಶೀಘ್ರ ಬಂಧಿಸುವ ಮೂಲಕ ಕೋಮು ಸೌಹಾರ್ಧತೆ ಕಾಪಾಡಬೇಕು. ಅ.16 ಶುಕ್ರವಾರ ಸಂಜೆಯೊಳಗೆ ಇನ್ನುಳಿದ ಆರೋಪಿಗಳ ಬಂಧನವಾಗದಿದ್ದರೇ ದಲಿತ ಶ್ರೇಯೋಭಿವೃದ್ಧಿಯ ವಿವಿಧ ಶಾಖೆಗಳ ಸರ್ವ ಸದಸ್ಯರು ಒಗ್ಗೂಡಿ ಉಡುಪಿ ಜಿಲ್ಲಾಧಿಕಾರಿ ಕಛೇರಿಯೆದುರು ಉಘ್ರ ಹೋರಾಟ ನಡೆಸುತ್ತೇವೆಂದು ದಲಿತ ಶ್ರೇಯೋಭಿವೃದ್ಧಿ ಸಮಿತಿ ಬಳ್ಕೂರಿನ ಕೆ. ತಿಲಕರಾಜ್ ಬಳ್ಕೂರು ಆಗ್ರಹಿಸಿದ್ದಾರೆ.

ಸಂಸದೆ ಶೋಭಾ ಭೇಟಿ: ಉಡುಪಿ ಹಾಗೂ ಚಿಕ್ಕಮಗಳೂರು ಸಾಂಸದೆ ಶೋಭಾ ಕರಂದ್ಲಾಜೆ ಅವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಮಂಜುನಾಥ್ ಹಾಗೂ ವಿಜಯ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾಪುರದ ಗಂಗೊಳ್ಳಿ, ಕೋಡಿ ಹಾಗೂ ಕಂಡ್ಲೂರು ಭಾಗಗಳಲ್ಲಿ ನಿರಂತರವಾಗಿ ಕೋಮು ಭಾವನೆಗಳನ್ನು ಪ್ರಚೋಧಿಸಿ ಹಿಂದೂ ಯು‌ವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಕಾರ್ಯವಾಗುತ್ತಿದ್ದು ಇದು ಖಂಡನೀಯವಾಗಿದೆ. ತಕ್ಷಣ ಪೊಲೀಸರು ಈ ಬಗ್ಗೆ ಎಚ್ಚೆತ್ತುಕೊಂಡು ತಪ್ಪಿತಸ್ಥರನ್ನು ಬಂಧಿಸಬೇಕು. ಈ ಬಗ್ಗೆ ಜಿಲ್ಲಾ ಎಸ್ಪಿ ಅವರಿಗೂ ಮಾತನಾಡಿ ಘಟನೆ ಬಗ್ಗೆ ವಿವರಿಸುವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರ.ಕಾರ್ಯದರ್ಶಿ ಮಹೇಶ್ ಪೂಜಾರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ಉಡುಪಿ ಜಿ.ಪಂ. ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ಸದಸ್ಯೆ ಗೀತಾಂಜಲಿ ಸುವರ್ಣ, ಕುಂದಾಪುರ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ಬಿಜೆಪಿ ಎಸ್ಸಿ ಮೋರ್ಚಾದ ಗೋಪಾಲ ಕಳಿಂಜೆ, ಬಜರಂಗದಳ ತಾಲೂಕು ಸಂಚಾಲಕ ಸಂತೋಷ್ ಮೊದಲಾದವರಿದ್ದರು.

ಕಂಡ್ಲೂರಿನಲ್ಲಿ ಬಿಗಿ ಬಂದೋಬಸ್ತ್: ಬುಧವಾರ ತಡರಾತ್ರಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡ್ಲೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ ನೇತ್ರತ್ವದಲ್ಲಿ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ಹಗೂ ವಿವಿಧ ಠಾಣೆಯ ಉಪನಿರೀಕ್ಷಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪರಾರಿಯಾದ ಆರೋಪಿಗಳ ಬಂಧನಕ್ಕೂ ಈಗಾಗಲೇ ಪೊಲೀಸರು ಬಲೆಬೀಸಿದ್ದಾರೆ.

Write A Comment