ಬೆಂಗಳೂರು, ಅ.12: ಮಹಿಳೆಯರು ಮತ್ತು ಅವರ ಹೃದಯ ಸಂಬಂಧಿ ಸಮಸ್ಯೆಗಳಿಗೆ ವಯಸ್ಸಿನ ಮಿತಿಯಿಲ್ಲ. ಯುವ ಮಹಿಳೆಯರಿಗೆ, ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಿನ ಪರಿಣಾಮ ಬೀರಬಹುದು. ಎಸ್ಟ್ರೋಜಿನ್ ಪ್ರಮಾಣದ ಕುಸಿತ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಅಂದರೆ ಹೃದಯ ಸಂಬಂಧಿ ಸಮಸ್ಯೆಗಳನ್ನು ತರಬಹುದು. ಅಂಕಿ ಅಂಶಗಳ ಪ್ರಕಾರ, ಹೃದಯ ಸಂಬಂಧಿ ಸಮಸ್ಯೆಗಳಿಂದ 43 ಮಿಲಿಯನ್ ಭಾರತೀಯ ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಮೂರರಲ್ಲಿ ಒಬ್ಬ ಮಹಿಳೆಯು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಸ್ತನ್ಯಕ್ಯಾನ್ಸರ್‌ನಲ್ಲಿ ಸಾವಿನ ಪ್ರಮಾಣ ಪ್ರತಿ 31 ಜನರಿಗೆ ಒಬ್ಬರು.
ಆದರೂ, ಯುವ ಮಹಿಳೆಯರು ಹೃದಯ ಸಂಬಂಧಿ ಸಮಸ್ಯೆಗಳಿಂದ ಪುರುಷರಿಗಿಂತಲೂ ಕಡಿಮೆ ಅಪಾಯ ಎದುರಿಸುತ್ತಾರೆ. ಮಾಸಿಕ ಋತುಸ್ರಾವದಲ್ಲಿ ಎಸ್ಟ್ರೋಜೆನ್ ಪ್ರಮಾಣದ ನಷ್ಟ ಅಪಾಯದ ಪ್ರಮಾಣ ನಿರ್ಧರಿಸುವಲ್ಲಿ ಪ್ರಮುಖ ಪರಿಣಾಮ ಬೀರಲಿದೆ. ಕೊಲಂಬಿಯಾ ಏಷಿಯಾ ಹಾಸ್ಪಿಟಲ್, ಹೆಬ್ಬಾಳ್‌ನ ಕನ್ಸಲ್ಟಂಟ್ ಕಾರ್ಡಿಯೊಲಜಿಸ್ಟ್ ಡಾ.ಉಮೇಶ್ ಗುಪ್ತ ಅವರು, ಮಹಿಳೆಯರಿಗೆ ಹಾರ್ಮೋನ್‌ಗಳ ರಕ್ಷಣೆ ಹೆಚ್ಚಿರುತ್ತದೆ.
ಎಸ್ಟ್ರೋಜೆನ್ ಮತ್ತು ಪ್ರೊಗೆಸ್ಟೆರೋನ್ ಇದರಲ್ಲಿ ಸೇರಿದೆ. ಋತುಸ್ರಾವದ ಸಂದರ್ಭದಲ್ಲಿ ಎಸ್ಟ್ರೋಜೆನ್ ಪ್ರಮಾಣ ಕುಸಿಯಲಿದೆ. ಈ ಕುಸಿತ ಹೃದಯದ ಬಡಿತದ ಮೇಲೂ ಪರಿಣಾಮ ಬೀರಲಿದೆ. ಅಂದರೆ, ಋತುಸ್ರಾವದ ಬಳಿಕ, ಮಹಿಳೆಯರು ಹೃದಯ ಸಂಬಂಧಿ ಅಪಾಯಗಳಿಗೆ ತುತ್ತಾಗುವ ಸಾಧ್ಯತೆಗಳು, ಪುರುಷರಷ್ಟೇ ಅಂದರೆ ಸರಿಸುಮಾರು ಶೇ.60 ರಿಂದ 70ರಷ್ಟು ಇರುತ್ತದೆ ಎಂದು ಹೇಳುತ್ತಾರೆ.
ಋತುಸ್ರಾವದ ನಂತರದ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಎಲ್‌ಡಿಎಲ್ ಪ್ರಮಾಣ ಹೆಚ್ಚುವುದರಿಂದ (ಕೆಟ್ಟಕೊಬ್ಬಿನಾಂಶ) ಹಾಗೂ ಎಚ್‌ಡಿಎಲ್ ಪ್ರಮಾಣ ಕುಸಿಯುವುದರಿಂದ (ಒಳ್ಳೆಯ ಕೊಬ್ಬಿನಾಂಶ) ಉಂಟಾಗಲಿದೆ. ಹೆಚ್ಚಾಗಿ ಮಹಿಳೆಯರ ಋತುಸ್ರಾವ ಪೂರ್ವ ಅಪಾಯದ ಅಂಶಗಳು ಅಧಿಕ ರಕ್ತದ ಒತ್ತಡ, ಕೊಬ್ಬು, ಮಧುಮೇಹ, ಕೊಬ್ಬು, ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಲು ಕಾರಣವಾಗಲಿದೆ.
ಅಂದರೆ ಋತುಸ್ರಾವದ ಬಳಿಕ ಮಹಿಳೆಯರು ನಿಯಮಿತವಾಗಿ ಹೃದಯ ಸಂಬಂಧಿತ ತಪಾಸಣೆಗೆ, ಕನಿಷ್ಠ ಒಂದು ವರ್ಷಕ್ಕೊಮ್ಮೆ ಇಸಿಜಿ, ಎಕೊ ಕಾರ್ಡಿಯೋಗ್ರಾಂ, ಟ್ರೆಡ್‌ಮಿಲ್ ಪರೀಕ್ಷೆಗೆ ಒಳಗಾಗುವುದು ಅಗತ್ಯ ಎನ್ನುತ್ತಾರೆ ಉಮೇಶ್. ಇದರ ಜೊತೆಗೆ ಆರೋಗ್ಯಕರ ಜೀವನ ಶೈಲಿಯನ್ನು ನಿಯಮಿತವಾಗಿ ಪಾಲಿಸುವುದು ಅತ್ಯ. ಎಣ್ಣೆ ಆಧಾರಿತ ಆಹಾರ, ಕರಿದಖಾದ್ಯ, ಬೆಣ್ಣೆ, ತುಪ್ಪ ಮತ್ತಿತರ ಅಂಶಗಳ ಸೇವನೆ ಕುರಿತು ಜಾಗೃತರಾಗಿರಬೇಕು. ಹಣ್ಣು ಮತ್ತು ತರಕಾರಿಗಳ ಅಧಿಕ ಸೇವನೆ, ಕಡಿಮೆ ಕೊಬ್ಬಿನ ಅಂಶವಿರುವ ಡೈರಿ ಉತ್ಪನ್ನಗಳ ಸೇವನೆಯ, ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇವನೆ ಅಗತ್ಯವಾಗಿದೆ ಎಂದು ವೈದ್ಯರು ಸಲಹೆ ಮಾಡುತ್ತಾರೆ.
