ದುಬೈ : ಧಾರ್ಮಿಕ , ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂಚೂಣಿ ಸಂಸ್ಥೆ , ಅನಿವಾಸಿ ದೀನೀ ಸ್ನೇಹಿಗಳ ಅಭಿಮಾನ ಕೇಂದ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್ ತನ್ನ ಯಶಸ್ವೀ ಹದಿನೈದು ವರ್ಷಗಳ ಪೂರೈಕೆಯ ನೆನಪಿಗಾಗಿ ಡಿಸೆಂಬರ್ ೧೧ ರಂದು ಬೃಹತ್ ಕೆ.ಐ.ಸಿ ಕ್ರಿಸ್ಟಲ್ ಜುಬಿಲೀ ಮೀಟ್ ಹಾಗೂ ಯು ಎ ಇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ , ಹಾಗೂ ಪತ್ರಿಕಾ ಗೋಷ್ಠಿ , ಇತ್ತೀಚಿಗೆ ಜೆ ಡಬ್ಲ್ಯು ಮೆರಿಯೋಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಶರೀಫ್ ಕಾವು ರವರು ಪತ್ರಿಕಾ ಗೊಷ್ಟಿಯನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮದ ಸಂಪೂರ್ಣ ವಿವರಣೆಯನ್ನು ನೀಡಿದರು.
ಯು ಎ ಇ ಯಾ ಪ್ರತಿಷ್ಠಿತ ಸಭಾಂಗಣ ಓದ್ ಮೆಹ್ತಾ ದಲ್ಲಿರುವ ಇರಾನಿಯನ್ ಕ್ಲಬ್ ನಲ್ಲಿ ಆಯೋಜಿಸಿರುವ ಪ್ರಸಕ್ತ ಕಾರ್ಯಕ್ರಮದಲ್ಲಿ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಗೌರವ ಸಲಹೆಗಾರರು , ದಕ್ಷಿಣ ಭಾರತದ ಪ್ರತಿಷ್ಟಿತ ಸಯ್ಯದ್ ಮನೆತನದ ಅಸಯ್ಯದ್ ಅಲಿ ತಂಙಲ್ ಕುಂಬೋಲ್ , ದಕ್ಷಿಣ ಕನ್ನಡ ಜಿಲ್ಲೆಯ ವಿಧ್ವಾಂಸ ಜಗತ್ತಿನ ಕುಲಪತಿ ಶೈಖುನಾ ಅಲ್ ಹಾಜ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ , ಕೇರಳ ಹಾಗೂ ಕರ್ನಾಟಕ ರಾಜ್ಯದ ಪ್ರತಿಷ್ಟಿತ ಧಾರ್ಮಿಕ ಶಿಕ್ಷಣ ಸಂಸ್ಥೆ ನಂದಿ ದಾರುಸ್ಸಲಾಮ್ ಅರೇಬಿಕ್ ಕಾಲೇಜ್ ಇದರ ಕುಲಪತಿ , ಅಲ್ ಹಾಜ್ ಎ ವಿ ಅಬ್ದುಲ್ ರಹ್ಮಾನ್ ಉಸ್ತಾದ್ , ಹಾಗೂ ಕೆ ಐ ಎ ಅಧ್ಯಕ್ಷರೂ , ಹಲವಾರು ಸಂಘಸಂಸ್ಥೆಗಳ ಮುಂಚೂಣಿ ನಾಯಕರೂ ಆದ ಅಲ್ ಹಾಜ್ ಕೆ ಪಿ ಆಕರ್ಷಣ ಅಹಮ್ಮದ್ , ಕೆ ಐ ಸಿ ಶಿಲ್ಪಿ , ಪ್ರಾಭಾಷಣಗಾರ , ಪ್ರಸಕ್ತ ಕೆ ಐ ಸಿ ಅಕಾಡೆಮಿ ಸಂಘಟನಾ ಕಾರ್ಯದರ್ಶಿಯೂ ಆದ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ , ಕೆ ಐ ಎ ಅಕಾಡೆಮಿ ಕಾರ್ಯದರ್ಶಿಗಳೂ ಹಲವಾರು ವರ್ಷಗಳಿಂದ ಕೆ ಐ ಸಿ ಯನ್ನು ಪೋತ್ರಾಹಿಸುತ್ತಾ ಬಂದಿರುವ ಕೆ.ಎಂ ಬಾವಾ ಹಾಜಿ , ಕೆ ಐ ಎ ಅಕಾಡೆಮಿ ಕೋಶಾಧಿಕಾರಿ ಸಾದಿಕ್ ಹಾಜಿ ಆಕರ್ಷಣ್ , ಅಲ್ಲದೆ ತಾಯಿನಾಡಿನಿಂದ ಹಲವಾರು ಧಾರ್ಮಿಕ ಶೈಕ್ಷಣಿಕ ಸಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಗೈದ ನೇತಾರರು, ಯು ಎ ಇ ಸ್ವದೇಶೀ ಮೇಧಾವಿಗಳೂ , ಯು ಎ ಇ , ಸೌದಿ ಅರೇಬಿಯಾ , ಖತಾರ್ ಕುವೈಟ್ ಮೊದಲಾದ ಅರಬ್ ರಾಷ್ಟ್ರಗಳ ಅನಿವಾಸಿ ಉಧ್ಯಮಿಗಳು , ಸಂಘ ಸಂಸ್ಥೆಗಳ ನೇತಾರರು ಶಿಕ್ಷಣ ಪ್ರೇಮಿಗಳೂ , ಕೆ ಐ ಸಿ ಹಿತೈಷಿಗಳೂ , ಭಾಗವಹಿಸಲಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರಿಂದ ದಫ್ಫ್ ಪ್ರದರ್ಶನ ನಡೆಯಲಿದ್ದು ಕಾರ್ಯಕ್ರಮವು ಸಂಜೆ 5.30 ರಿಂದ ರಾತ್ರಿ 10.30 ರ ವರೆಗೆ ನಡೆಯಲಿದ್ದು , ಮಹಿಳೆಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ತೆಯಿದ್ದು ಯು ಎ ಇ ಯಾಧ್ಯಂತ ಕಾರ್ಯಕ್ರಮದ ಪ್ರಚಾರಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು , ಅನಿವಾಸಿ ಭಾರತೀಯ ದೀನೀ ಸ್ನೇಹಿಗಳು ಕಾರ್ಯಕ್ರಮದಲ್ಲಿ ಹೆಚ್ಹಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಠಿಯಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಪ್ರಧಾನ ಕಾರ್ಯದರ್ಶಿ ಹಮೀದ್ ಮಣಿಲ , ಕೆ ಐ ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ , ಕ್ರಿಸ್ಟಲ್ ಜುಬಿಲಿ ಸಲಹೆಗಾರರಾದ ರಫೀಕ್ ಅತೂರು , ಕ್ರಿಸ್ಟಲ್ ಜುಬಿಲಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ , ಸುಲೈಮಾನ್ ಮೌಲವಿ ಕಲ್ಲೇಗ , ಕ್ರಿಸ್ಟಲ್ ಜುಬಿಲಿ ಕೋಶಾಧಿಕಾರಿ ಅಶ್ರಫ್ ಖಾನ್ ಮಾಂತೂರ್ ,ಕೆ ಐ ಸಿ ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆ , ಕ್ರಿಸ್ಟಲ್ ಜುಬಿಲಿ ಕಾರ್ಯದರ್ಶಿ ಮುಸ್ತಫಾ ಗೂನಡ್ಕ , ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಬೈತಡ್ಕ , ಕ್ರಿಸ್ಟಲ್ ಜುಬಿಲಿ ಮಾಧ್ಯಮ ಪ್ರತಿನಿಧಿ ಅಸೀಫ್ ಮರೀಲ್ ಮೊದಲಾದವರು ಉಪಸ್ತಿತರಿದ್ದರು.


