ಮುಂಬೈ: ಸದಾ ವಿವಾದಗಳಿಂದ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ, ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಪೂಜಾ ಮಿಶ್ರಾ ದೆಹಲಿಯ ಶಾಪ್ ಒಂದರ ಸಿಬ್ಬಂದಿಗೆ ಈಗ ಥಳಿಸುವ ಮೂಲಕ ಈಗ ಸುದ್ದಿಯಾಗಿದ್ದಾಳೆ.
ಭಾನುವಾರ ರಾತ್ರಿ ಕರೋಲ್ ಬಾಗ್ ಪ್ರದೇಶದಲ್ಲಿನ ಶಾಪ್ಗೆ ಶಾಪಿಂಗ್ಗೆ ಬಂದಿದ್ದ ಪೂಜಾ ಫೋನಿನಲ್ಲಿ ಮಾತನಾಡುತ್ತಿರುವ ವೇಳೆ ಅಲ್ಲಿನ ಸಿಬ್ಬಂದಿ ಏನೋ ಹೇಳಲು ಬಂದಿದ್ದಾನೆ. ಈ ವೇಳೆ ಸಿಟ್ಟಾದ ಪೂಜಾ ಅಲ್ಲೇ ಅವನಿಗೆ ಬಾರಿಸಿದ್ದಾಳೆ. ಈ ವೇಳೆ ಆತ ಬಾರಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಆಕೆ ಮತ್ತಷ್ಟು ಸಿಟ್ಟಾಗಿ ಬೈದು ಹೊಡೆದು ಕಾಲಿನಿಂದ ಒದ್ದಿದ್ದಾಳೆ.
ಈ ಘಟನೆಯ ನಂತರ ಪ್ರತಿಕ್ರಿಯೆ ನೀಡಿದ ಪೂಜಾ ಮಿಶ್ರಾ ಇಬ್ಬರು ಯುವಕರು ನನ್ನ ಮೇಲೆ ಕಿರುಕುಳ ನೀಡಿದ್ದರು ಈ ಕಾರಣಕ್ಕೆ ನಾನು ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಈಕೆ ಅಂಗಡಿಯ ಸಿಬ್ಬಂದಿಗೆ ಥಳಿಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ.
ಈ ಹಿಂದೆ ಹಿಂದಿ ಆವೃತ್ತಿಯ ಬಿಗ್ ಬಾಸ್ನ 5ನೇ ಆವೃತ್ತಿಯಲ್ಲಿ ಸಾಕಷ್ಟು ವಿವಾದಗಳನ್ನು ಮಾಡಿದ್ದ ಈಕೆ ಇತ್ತೀಚಿಗೆ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಹೊಟೇಲ್ ಸಿಬ್ಬಂದಿಗೆ ಥಳಿಸಿದ್ದಳು.
https://youtu.be/PCTeIbDIvWU
