ಅಂತರಾಷ್ಟ್ರೀಯ

ಆರೋಗ್ಯದ ಮೇಲೆ ಫೋನ್ ವಿಕಿರಣ ಹೇಗೆ ಪರಿಣಾಮ ಬೀರುತ್ತದೆ?

Pinterest LinkedIn Tumblr

mobile-phoneಹೆಚ್ಚಿನ ತರಂಗಾಂತರವಿರುವ ಸಿಗ್ನಲ್‌ಗಳನ್ನು ಸ್ವೀಕರಿಸಿಲು ಮತ್ತು ಹೊರಸೂಸಲು ಸಾಧ್ಯವಿರುವಂತಹ ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅವು ಹೊರಹಾಕುವ ವಿಕಿರಣಗಳು ನಮ್ಮ ದೇಹಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವುಗಳು ಹೊರಸೂಸುವ ವಿಕಿರಣಗಳಿಂದ ದೇಹದ ವಿವಿಧ ಕೋಶಗಳು ಹ ಹಾನಿಗೊಳಗಾಗುತ್ತವೆ ಎಂದು ಅಧ್ಯಯನದಿಂದ ಸಾಬೀತಾಗಿದೆ. ಹೀಗಿರುವಾಗ ನಾವು ಬಳಸುವ ಫೋನ್ ಯಾವ ಪ್ರಮಾಣದಲ್ಲಿ ವಿಕಿರಣ ಸೂಸುತ್ತದೆ ಎಂಬುದು ನಾವು ಅರಿತಿರ ಬೇಕು.

ಏನಿದು ಎಸ್.ಎ. ಆರ್ (Specific Absorption Rate)?
ಮೊಬೈಲ್ ಫೋನ್‌ಗಳ ವಿಕಿರಣ (ರೇಡಿಯೇಷನ್)ನ ತೀವ್ರತೆಯ ಮಾಪನವೇ ಎಸ್ ಆರ್ ಎಸ್ ( Specific Absorption Rate ). ಅಂದರೆ ನಾವು ಮೊಬೈಲ್ ಫೋನ್ ಬಳಸುವಾಗ  ನಮ್ಮ ದೇಹಕ್ಕೆ ತಾಕುವ ರೇಡಿಯೋ ಫ್ರೀಕ್ವೆನ್ಸಿ ಅಥವಾ ತೀವ್ರ ತರಂಗಾಂತರದ ಉಷ್ಣತೆಯ ಅಳತೆಯನ್ನು ಎಸ್ ಆರ್ ಎಸ್‌ನಲ್ಲಿ ಸೂಚಿಸಲಾಗುತ್ತದೆ.   ಫೆಡರಲ್ ಕಮ್ಯುನಿಕೇಷನ್ ಕಮಿಷನ್ (ಎಫ್.ಸಿ.ಸಿ) ಮಾನದಂಡಗಳನ್ನನುಸರಿಸಿ ಆ ಅಳತೆಯನ್ನು ಅಂಗೀಕರಿಸಲಾಗಿದೆ.

ಎಸ್.ಎ. ಆರ್ ಎಷ್ಟಿರಬೇಕು?

ಎಸ್ ಎ ಆರ್ ನ್ನು ವಾಟ್ಸ್ / ಕಿಲೋಗ್ರಾಂನಲ್ಲಿ ಹೇಳಲಾಗುತ್ತದೆ.  ಎಫ್‌ಸಿಸಿಯ ನಿಯಮವನುಸರಿಸಿ  ಒಂದು ಮೊಬೈಲ್ ಹೊರ ಸೂಸುವ ವಿಕಿರಣದ ಗರಿಷ್ಠ ಅಳತೆ 1.6 ವಾಟ್ ಕಿಲೋಗ್ರಾಂ ಆಗಿದೆ. ಇದು ಕಡಿಮೆಯಿದ್ದಷ್ಟು ದೇಹಕ್ಕೆ ಒಳ್ಳೆಯದು.

ಎಸ್ ಎ ಆರ್ ಎಷ್ಟಿದೆ ಎಂದು ತಿಳಿಯುವುದು ಹೇಗೆ?

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ  *#07# ಎಂದು ಡಯಲ್ ಮಾಡಿದರೆ ಎಸ್‌ಎಆರ್ ಎಷ್ಟಿದೆ ಎಂದು ಅರಿಯಲು ಸಾಧ್ಯ. ಕೆಲವೊಂದು ಫೋನ್‌ಗಳಲ್ಲಿ ಸೆಟ್ಟಿಂಗ್‌ಗೆ ಹೋಗಿ ಎಬೌಟ್ ಫೋನ್ ಎಂಬಲ್ಲಿ ಲೀಗಲ್ ಇನ್ಫಾರ್ಮೇಷನ್ ಪಟ್ಟಿಯಲ್ಲಿ  ಎಸ್‌ಎಆರ್ ಪ್ರಮಾಣ ತಿಳಿಯಬಹುದು.

ನೆನಪಿಡಿ :ಇನ್ನು ಮುಂದೆ ಫೋನ್ ಖರೀದಿಸುವಾಗ ಕಡಿಮೆ ಎಸ್‌ಎಆರ್ ಇರುವ ಫೋನ್‌ಗಳನ್ನೇ ಆಯ್ಕೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

Write A Comment