ಕನ್ನಡ ವಾರ್ತೆಗಳು

ಉಡುಪಿ: ಈಜಲು ತೆರಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

Pinterest LinkedIn Tumblr

Shirva_Youths Death_Swimm

ಉಡುಪಿ: ಈಜಲು ನದಿಗೆ ತೆರಳಿದ ವೇಳೆ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಪಾಂಬೂರಿನ ಪಂಜಿಮಾರ್ ಎಂಬಲ್ಲಿನ ನದಿಯಲ್ಲಿ ಭಾನುವಾರ ನಡೆದಿದೆ.

ಶಿರ್ವ ಪಾಂಬೂರಿನ ಆಸ್ಟಿನ್ ಆಳ್ವಾ(18) ಹಾಗೂ ಅಶ್ವಿನ್ ಡಿಸೋಜಾ (19) ನೀರಿನಲ್ಲಿ ಮುಳುಗಿ ಮ್ರತಪಟ್ಟವರು.

ಸುಮಾರು ಎಂತು ಜನರ ತಂಡವೊಂದು ಕಾರ್ಯಕ್ರಮವೊಂದನ್ನು ಮುಗಿಸಿ ಈಜುವ ಸಲುವಾಗಿ ಪಂಜಿಮಾರು ಎಂಬಲ್ಲಿನ ನದಿಗೆ ತೆರಳಿದ ವೇಳೆ ಈ ದುರ್ಘಟನೆ ನಡೆದಿದೆ. ಈಅಜಲೆಂದು ನೀರಿಗಿಳಿದ ವೇಳೆ ಈ ಯುವಕರಿಬ್ಬರು ನೀರಿನ ಸೆಳೆತಕ್ಕೆ ಮುಳುಗಿದ್ದು ಇಬ್ಬರನ್ನೂ ರಕ್ಷಿಸಲು ಉಳಿದ ಸ್ನೇಹಿತರು ಮುಂದಾದರೂ ಕೂಡ ಅದು ಅಸಾಧ್ಯವಾಗಿದೆ. ಬಳಿಕ ಸ್ಥಳೀಯರು ಆಗಮಿಸಿ ಯುವಕರ ಮ್ರತದೇಹವನ್ನು ಮೇಲಕ್ಕೆತ್ತಿದ್ದಾರೆ.

ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment