ಕಾನ್ಪುರ, ಅ.11- ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಮ್ಲಾ ಪಡೆ ಎಬಿಡಿ ವಿಲಿಯರ್ಸ್ರ ಶತಕದ ನೆರವಿನಿಂದ ನೀಡಿದ್ದ 304 ರನ್ಗಳ ಸವಾಲು ಮುಂದಿಟ್ಟಿತು.
ಇದನ್ನು ಬೆನ್ನಟ್ಟಿದ ಭಾರತ ರೋಹಿತ್ ಶರ್ಮ ಹಾಗೂ ರಹಾನೆಯವರ ಸಮಯೋಚಿತ ಆಟದ ನೆರವಿನಿಂದ ಉತ್ತಮ ಆಟ ಕಂಡುಬಂದರೂ ಕೊನೆ ಕ್ಷಣದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಕೊನೆಯ 2 ಒವರ್ ನಲ್ಲಿ 22 ರನ್ ಗಳು ಬೇಕಾಗಿತ್ತು ಧೋನಿ ಮತ್ತು ಬಿನ್ನಿ ಸ್ಟೆನ್ ಅವರ ಬೌಲಿಂಗ್ ನಲ್ಲಿ 11 ರಂ ಗಳಿಸಿದರೆ , ಕೊನೆಯ ಒವರ್ ನಲ್ಲಿ ರಬಾಂಡಾ ಅವರ ಬೌಲಿಂಗ್ ನಲ್ಲಿ ಧೋನಿ ಹಾಗೂ ಬಿನ್ನಿ ಒಬ್ಬರ ನಂತತ ಒಬ್ಬರು ಔಟಾದ ಪರಿಣಾಮ ಭಾರತ ಕೇವಲ 6 ರನ್ ಮಾತ್ರ ಬಂತು.
ನಿಗದಿತ 50 ಒವರ್ ಗಳಲ್ಲಿ 298 ರನ್ಗಳನ್ನು ಮಾಡಿ ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ 5 ರನ್ ಗಳಿಂದ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.