ಅಂತರಾಷ್ಟ್ರೀಯ

ಇನ್ಸುಲಿನ್ ಸ್ರವಿಸುವಿಕೆ ಸಾಮರ್ಥ್ಯದ ಜೀವಕೋಶಗಳ ಉತ್ಪತ್ತಿ: ಮಧುಮೇಹಕ್ಕೆ ಹೊಸ ಚಿಕಿತ್ಸೆ

Pinterest LinkedIn Tumblr

diabetesಲಂಡನ್: ಟೈಪ್-1 ಮಧುಮೇಹಕ್ಕೆ ಚಿಕಿತ್ಸೆ ನೀಡುವುದಕ್ಕೆ ಇನ್ಸುಲಿನ್ ಸ್ರವಿಸುವಿಕೆಯ ಸಾಮರ್ಥ್ಯ ಹೊಂದಿರುವ ಜೀವಕೋಶಗಳನ್ನು ಉತ್ಪತ್ತಿ ಮಾಡುವ ಹೊಸ ತಂತ್ರವೊಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ವಿಶಿಷ್ಠ ಜೀವಕೋಶಗಳು ರಕ್ತದಲ್ಲಿನ ಗ್ಲುಕೋಸ್ ನ ಮಟ್ಟವನ್ನು ನಿಯಂತ್ರಿಸುವ ಇನ್ಸುಲಿನ್ ನ ಸ್ರವಿಸುವಿಕೆ ಹಾಗೂ ಅದನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತವೆ. ಸಾಮಾನ್ಯವಾಗಿ ಟೈಪ್-1 ಮಧುಮೆಹದಲ್ಲಿ ನಿರೋಧಕ ವ್ಯವಸ್ಥೆಯು ತಪ್ಪಾಗಿ ದಾಳಿ ಮತ್ತು ಪ್ಯಾಂಕ್ರಿಯಾದಲ್ಲಿ (ಮೇದೋಜ್ಜೀರಕ ಗ್ರಂಥಿ)ರಲ್ಲಿ ಬೀಟಾ ಜೀವಕೋಶಗಳನ್ನು ನಾಶಪಡಿಸುತ್ತದೆ.

ಪ್ರಸ್ತುತ ಮಧುಮೇಹದ ವಿರುದ್ಧ ಹೋರಾಡಲು ಇರುವ ಭರವಸೆಯ ಚಿಕಿತ್ಸೆ ಎಂದರೆ ಅದು ನಾಶವಾದ ಬೀಟಾ ಸೆಲ್ ಗಳನ್ನು ತುಂಬುವುದಾಗಿದೆ. ಮಾನವ ಪ್ಯಾಂಕ್ರಿಯಾಟಿಕ್ ನಾಳದಿಂದ ಪಡೆದ ಜೀವಕೋಶಗಳು (HDDCs) ಜೀವಕೋಶಗಳ ಆಕರ್ಷಕ ಮೂಲವಾಗಿದೆ ಎಂದು ಬೆಲ್ಜಿಯಂ ನ  ಕ್ಯಾತೊಲೊಕ್ ದೆ ಲೊವ್ವೈನ್ ವಿವಿ ಸಂಶೋಧಕರು ತಿಳಿಸಿದ್ದಾರೆ.

ಬೀಟಾ ಸೆಲ್ ಗಳಂತೆ ವರ್ತಿಸಲು ಹೆಚ್.ಡಿ.ಡಿ.ಸಿ ಜೀವಕೋಶಗಳನ್ನು ರೀ ಪ್ರೋಗ್ರಾಮ್ ಮಾಡಲಾಗುತ್ತದೆ. ಇದರಿಂದ ಪ್ಯಾಕ್ರಿಯಾದೊಳಗೆ ಇನ್ಸುಲಿನ್ ಸ್ರವಿಸುವಿಕೆ ಸಾಧ್ಯವಾಗುತ್ತದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ. ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿ ಸಭೆಯಲ್ಲಿ ಸಂಶೋಧನೆಯ ಬಗೆಗಿನ ವಿಷಯವನ್ನು ಪರಿಚಯಿಸಲಾಗಿದೆ.

Write A Comment