ರಾಷ್ಟ್ರೀಯ

ಸೋಮನಾಥ ದೇವಾಲಯಕ್ಕೆ ಬಾಂಬ್ ಬೆದರಿಕೆ

Pinterest LinkedIn Tumblr

somanataಅಹಮದಾಬಾದ್: ಭಾರತದ ಅತ್ಯಂತ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾದ ಗುಜರಾತ್‌ನ ಸೋಮನಾಥ ದೇವಾಲಯವನ್ನು ಸ್ಪೋಟಿಸುವುದಾಗಿ ಬೆದರಿಕೆ ಪತ್ರ ಬಂದಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಹೆಸರಿನಲ್ಲಿ ದೇವಾಲಯದ ಟ್ರಸ್ಟ್‌ಗೆ ಬೆದರಿಕೆ  ಬಂದಿದ್ದು, ದೇವಾಲಯದಲ್ಲಿ ವಿಧ್ವಂಸಕಾರಿ ಕೃತ್ಯವನ್ನು ಎಸಗುವುದಾಗಿ ಪತ್ರದಲ್ಲಿ ಬರೆಯಲಾಗಿದೆ.

ಬೆದರಿಕೆ ಪತ್ರದ ಕುರಿತು ಮಾಹಿತಿ ಪಡೆದ ಸರ್ಕಾರ ದೇವಸ್ಥಾನಕ್ಕೆ ಬಿಗಿ ಭದ್ರತೆಯನ್ನು ಒದಗಿಸಿದ್ದು, ಹೈ ಅಲರ್ಟ್ ಘೋಷಿಸಿದೆ. ಜತೆಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಬಾಂಬ್ ನಿಷ್ಕ್ರೀಯ ದಳ ಸ್ಥಳದಲ್ಲಿ ಪರಿಶೀಲನೆಯನ್ನು ಕೈಗೊಂಡಿದೆ. ಆದರೆ ಶೋಧನೆಯಲ್ಲಿ ಯಾವುದೇ ಅಪಾಯಕಾರಿ ವಸ್ತುವೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಇದಕ್ಕೂ ಮೊದಲು ಕಳೆದ ಸೆಪ್ಟೆಂಬರ್‌ 29ರಂದು ಮುಂಬೈ ಏರ್‌ಪೋರ್ಟ್‌ ಹಾಗೂ ತಾಜ್‌ ಹೋಟೆಲ್‌‌ಗಳನ್ನು ಸ್ಪೋಟಿಸುವುದಾಗಿ  ಉಗ್ರರು ಬೆದರಿಕೆ ಒಡ್ಡಿದ್ದರು.

Write A Comment