ಮನೋರಂಜನೆ

ದೀಪಾವಳಿಗೆ ಕಮಲ್ ಅಭಿನಯದ ‘ತೂಂಗವಾಸಂ’

Pinterest LinkedIn Tumblr

kamalನಟ, ನಿರ್ಮಾಪಕ ಕಮಲ್‌ ಹಾಸನ್‌ ಅಭಿನಯದ, ತಮಿಳು– ತೆಲುಗು ಎರಡೂ ಭಾಷೆಗಳಲ್ಲಿ ನಿರ್ಮಾಣವಾದ ‘ತೂಂಗವಾಸಂ’ ಚಿತ್ರ  ಇದೇ ನವೆಂಬರ್‌ 10ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ.

‘ನವೆಂಬರ್‌ 10ರಂದು ಅಮೆರಿಕಾದಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಪ್ರಥಮ ಪ್ರದರ್ಶನಕ್ಕೆ ನವೆಂಬರ್‌ 9ರಂದೇ ವ್ಯವಸ್ಥೆ ಮಾಡಲಾಗಿದೆ’ ಎಂದು ಇಂಡಿಯಾ ಎಝಡ್‌ ವಿತರಣಾ ಸಂಸ್ಥೆ ತಿಳಿಸಿದೆ.

ಅನೇಕ ವರ್ಷಗಳಿಂದ ಕಮಲ್‌ ಅವರಿಗೆ ಸಹಾಯಕರಾಗಿದ್ದ ರಾಜೇಶ್‌ ಎಂ. ಸೆಲ್ವಾ ನಿರ್ದೇಶನದ ಈ ಚಿತ್ರ ಪ್ರೆಂಚ್‌ ಭಾಷೆಯ ‘ಸ್ಲೀಪ್‌ಲೆಸ್‌ ನೈಟ್‌’ ಚಿತ್ರದ ರೀಮೇಕ್‌ ಆಗಿದೆ.

ಕಮಲ್‌ ಹಾಸನ್‌ ಪೊಲೀಸ್‌ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಪ್ರಕಾಶ್‌ ರಾಜ್‌, ಕಿಶೋರ್‌, ಸಂಪತ್‌ ರಾಜ್‌, ಮಧು ಶಾಲಿನಿ ಮುಖ್ಯ ಭೂಮಿಕೆಲ್ಲಿ ನಟಿಸುತ್ತಿದ್ದಾರೆ.

Write A Comment