ಮಲ್ಲಿಕಾ ಶೆರಾವತ್ ಯಾರಿಗೆ ಗೊತ್ತಿಲ್ಲ ಹೇಳಿ. ಹೌದು, ಮಲ್ಲಿಕಾ ಅಂದ್ರೆ ಒಂದು ರೀತಿ ಮಲ್ಲಿಗೆ ಹೂವಿನಂತೆ. ಮಲ್ಲಿಗೆಯ ಪರಿಮಳ ಹೇಗೆ ವ್ಯಾಪಿಸ್ತದೋ ಹಾಗೇ ಮಲ್ಲಿಕಾ ಕೂಡ. ಅದಿರಲಿ, ಮಲ್ಲಿಕಾ ಶೆರಾವತ್ಳ ಇನ್ನೊಂದು ಹೆಸರು ವಿವಾದಗಳ ರಾಣಿ ಅಂತ. ಅವಳು ಬಾಯಿ ಬಿಟ್ಟರೆ ಏನಾದರೊಂದು ವಿವಾದ ಸೃಷ್ಟಿಯಾಯ್ತು ಅಂತಾನೇ ಲೆಕ್ಕ. ಅಂದಹಾಗೆ ಯಾವುದೋ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡೋ ವೇಳೆ ಮಲ್ಲಿಕಾ ಹೊಸದೊಂದು ವಿವಾದ ಸೃಷ್ಟಿಸಿದ್ದಾಳೆ. ಅದೇನಪ್ಪಾ ಅಂದ್ರೆ, ಬಾಲಿವುಡ್ನ ಖಾನ್ ತ್ರಯಗಳಲ್ಲೊಬ್ಬನಾದ ಸಲ್ಮಾನ್ಖಾನ್ ಹಾಗೂ ಜಾನ್ ಅಬ್ರಹಾಂ ಬಗ್ಗೆ ಅದೇನೋ ಹೇಳಿ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದಳಂತೆ.
ವೇದಿಕೆ ಮೇಲೆ ಬಟ್ಟೆ ಬಿಚ್ಚಿ ತಮ್ಮ ಂಗಾಂಗ ಪ್ರದರ್ಶನ ಮಾಡಿದ ಈ ಸಿಕ್ಸ್ಪ್ಯಾಕ್ಗಳನ್ನು ಮಲ್ಲಿಕಾ ಹಿಗ್ಗಾಮುಗ್ಗಾ ಟೀಕಿಸಿದಳಂತೆ. ಈಗ ಅದಲ್ಲ ಮುಖ್ಯ ವಿಷ್ಯ. ಹೇಳಿದ್ರೆ ನೀವು ಅಚ್ಚರಿ ಪಡ್ತೀರಿ. ಯಾರೋ ಒಬ್ಬ ಪುಣ್ಯಾತ್ಮ ಹಿಂದಿಯಲ್ಲಿ ದೇವಮಾತೆ ರಾಧೆ ಮಾಳ ಜೀವನಕಥೆ ಆಧರಿಸಿದ ಸಿನಿಮಾ ತೆಗೀತಾ ಇದಾನಂತೆ. ರಾಧೆ ಮಾ ಅಂದ್ರೆ ಗೊತ್ತಲ್ಲ… ಸ್ವಯಂಘೋಷಿತ ಈ ದೇವ ಮಾನವಿ ಮೇಲೆ ಹಲವು ಪ್ರಕರಣಗಳಿದ್ದು, ಮೊನ್ನೆ ಪೊಲೀಸರ ಅತಿಥಿಯೂ ಆಗಿದ್ಲಲ್ಲ. ಹಾಂ… ಅದೇ ದೇವಮಾನವಿ ರಾಧೆಮಾಳ ಪಾತ್ರವನ್ನು ಇದೇ ಮಲ್ಲಿಕಾ ಮಾಡ್ತಿದ್ದಾಳಂತೆ..!