ಸ್ಟಾಕ್ಹೋಂ, ಅ.8: ಬೆಲಾರುಸ್ನ ಹಿರಿಯ ಲೇಖಕಿ ಸ್ವೆಟ್ಲಾನಾ ಅಲೆಕ್ಸಿವೆಕ್ (67) ಅವರಿಗೆ 2015ರ ಸಾಹಿತ್ಯ ನೊಬೆಲ್ ಪ್ರಶಸ್ತಿ ಲಭಿಸಿದೆ.
ಅಲೆಕ್ಸಿವೆಕ್, ಸಾಹಿತ್ಯಕ್ಕಾಗಿ ನೊಬೆಲ್ ಪಡೆದುಕೊಂಡಿರುವ ಜಗತ್ತಿನ 14ನೆ ಲೇಖಕಿಯಾಗಿದ್ದಾರೆ.
ಅಲೆಕ್ಸಿವೆಕ್, ತನ್ನ ವೃತ್ತಿಜೀವನದ ಆರಂಭದಲ್ಲಿ ಹಲವು ಸ್ಥಳೀಯ ಪತ್ರಿಕೆಗಳಿಗೆ ವರದಿಗಾರ್ತಿಯಾಗಿ ಕೆಲಸ ಮಾಡಿದ್ದರು. ತದನಂತರ ಸಾಹಿತ್ಯ ನಿಯತಕಾಲಿಕ ವೊಂದಕ್ಕೆ ಪ್ರತಿನಿಧಿಯಾಗಿದ್ದರು.
ಎರನೆ ಮಹಾ ಯುದ್ಧ, ಸೋವಿಯತ್-ಆಫ್ಘಾನ್ ಯುದ್ಧ, ಸೋವಿಯತ್ ಒಕ್ಕೂಟದ ಪತನ ಮತ್ತು ಚೆರ್ನೊಬೆಲ್ ದುರಂತ ಘಟನೆಗಳ ಕುರಿತು ಅವರು ವ್ಯಾಪಕವಾಗಿ ಬರೆದಿದ್ದಾರೆ. ದೇಶಭ್ರಷ್ಟರಾಗಿ ಪ್ಯಾರಿಸ್, ಗೋಥೆನ್ಬರ್ಗ್ ಮತ್ತು ಬರ್ಲಿನ್ಗಳಲ್ಲಿ 11 ವರ್ಷಗಳ ಕಾಲ ವಾಸವಿದ್ದ ಅವರು, 2011ರಲ್ಲಿ ಸ್ವದೇಶಕ್ಕೆ ವಾಪಸ್ ಆಗಿದ್ದಾರೆ.