ಮನೋರಂಜನೆ

ಆಕ್ಷನ್ ಜಾಕ್ಸನ್!

Pinterest LinkedIn Tumblr

jaksanಪ್ರತಿಯೊಬ್ಬ ಕಲಾವಿದ/ದೆಗೂ ಒಂದು ಕನಸಿನ ಪಾತ್ರ ಎಂಬುದಿರುತ್ತದೆ. ‘ಡ್ರೀಮ್ ಗರ್ಲ್’ನ ಗತ್ತು ತೋರುತ್ತ ಬರುವ ನಟಿಮಣಿಯರಿಗಂತೂ ಇಂಥ ಆಕಾಂಕ್ಷೆ ಅಧಿಕ. ಆದರೆ ಅದು ನೆರವೇರುವುದು ಅಷ್ಟು ಸುಲಭ ಅಲ್ಲ. ನಟಿ ಆಮಿ ಜಾಕ್ಸನ್ ವಿಚಾರದಲ್ಲಿ ಇದು ಉಲ್ಟಾ! ಬ್ರಿಟನ್ ಮೂಲದ 23ರ ಹರೆಯದ ಈ ಬೆಡಗಿಗೆ ಕನಸೊಂದಿತ್ತು; ಆ ಕನಸು ಸಾಕಾರಗೊಂಡಿದೆ ಕೂಡ. ಶಂಕರ್ ನಿರ್ದೇಶನದ ‘ಐ’ ಚಿತ್ರದಲ್ಲಿ ನಟಿಸಿದ ಮೇಲೆ ಅನೇಕರು ‘ನಿಮ್ಮ ಡ್ರೀಮ್ ರೋಲ್ ಯಾವುದು’ ಎಂದು ಆಮಿಗೆ ಕೇಳುತ್ತಿದ್ದರಂತೆ. ಅದಕ್ಕೆ ಅವರ ಉತ್ತರ; ‘ನನಗೆ ಸಾಹಸಪ್ರಧಾನ ಪಾತ್ರಗಳೆಂದರೆ ಇಷ್ಟ’. ಅಕ್ಷಯ್ಕುಮಾರ್ ನಾಯಕತ್ವದ ‘ಸಿಂಗ್ ಈಸ್ ಬ್ಲಿಂಗ್’ ಚಿತ್ರದಿಂದಾಗಿ ಆ ಆಕ್ಷನ್ ಕ್ವೀನ್ ಕನಸು ನನಸಾಗಿದೆ.

ಹೌದು, ತೆರೆಕಂಡ ಐದೇ ದಿನಕ್ಕೆ 61.54 ಕೋಟಿ ರೂ. ಗಳಿಸಿ ಬಾಕ್ಸ್ ಆಫೀಸ್​ನಲ್ಲಿ ಗೆಲುವಿನ ನಗೆ ಬೀರಿರುವ ‘…ಬ್ಲಿಂಗ್’ನಲ್ಲಿ ಆಮಿ ನಾಯಕಿ. ಚಿತ್ರದಲ್ಲಿ ಸಾಕಷ್ಟು ಆಕ್ಷನ್ ದೃಶ್ಯಾವಳಿ ಇದ್ದಿದ್ದರಿಂದ ಆಮಿಗೆ ಹೆಚ್ಚಿನ ಅವಕಾಶ ಸಿಕ್ಕಂತಾಗಿದೆ. ‘ಮಾರ್ಷಲ್ ಆರ್ಟ್ಸ್ ಮತ್ತು ಕಿಕ್ ಬಾಕ್ಸಿಂಗ್ ಮಾಡಲು ಚಿತ್ರದಲ್ಲಿ ಅವಕಾಶ ಸಿಕ್ಕಿತು. ಒಳ್ಳೆಯ ತರಬೇತುದಾರರಿಂದ ಸಾಹಸದ ಪಟ್ಟುಗಳನ್ನು ಕಲಿತೆ’ ಎಂದು ಸಂಭ್ರಮಿಸá-ತ್ತಾರವರು. ‘…ಬ್ಲಿಂಗ್’ ಜತೆಗೆ ಧನುಷ್ ನಟನೆಯ ಹೊಸ ಚಿತ್ರದಲ್ಲೂ ಆಮಿ ನಟಿಸುತ್ತಿದ್ದರು. ಹಾಗಾಗಿ, ತರಬೇತುದಾರರು ನೇರ ಚೆನ್ನೈಗೆ ಬಂದು ಆಮಿಗೆ ಆಕ್ಷನ್ ಪಾಠ ಹೇಳಿಕೊಡುತ್ತಿದ್ದರಂತೆ! ಸದ್ಯ ಬಾಲಿವುಡ್ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ಆಮಿ ವಿಜಯ್ ಜತೆ ‘ವಿಜಯ್ 59’ ಹಾಗೂ ಉದಯನಿಧಿ ಸ್ಟಾಲಿನ್ ನಟಿಸಿ, ನಿರ್ವಿುಸುತ್ತಿರುವ ‘ಗೇಧು’ ಚಿತ್ರದಲ್ಲೂ ಇದ್ದಾರೆ.

Write A Comment