ರಾಷ್ಟ್ರೀಯ

ಶೀನಾ ಬೋರಾ ಪ್ರಕರಣ: ಆಸ್ಪತ್ರೆಯಿಂದ ಬಿಡುಗಡೆಯಾದ ಇಂದ್ರಾಣಿ

Pinterest LinkedIn Tumblr

sheenaಮುಂಬೈ: ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಶುಕ್ರವಾರ ಮುಂಬೈನ ಜೆ.ಜೆ. ಆಸ್ಪತ್ರೆಗೆ ದಾಖಲಾಗಿದ್ದ ಇಂದ್ರಾಣಿ ಮುಖರ್ಜಿ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇಂದ್ರಾಣಿಯನ್ನು ಆಸ್ಪತ್ರೆಯಿಂದ ನೇರವಾಗಿ ಜೈಲಿಗೆ ಕರೆದೊಯ್ಯಲಾಗಿದೆ.

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಾತ್ರೆಗಳನ್ನು ಸೇವಿಸಿದ ಪರಿಣಾಮ ಅವರು ಅಸ್ವಸ್ಥರಾಗಿದ್ದರು ಎಂಬುದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ವಿಶೇಷ ಐಜಿಪಿ ಬಿಪಿನ್ ಕುಮಾರ್ ಸಿಂಗ್ ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

48ರ ಹರೆಯದ ಮುಖರ್ಜಿ ಅವರನ್ನು ಕಳೆದ ಶುಕ್ರವಾರ ಬೈಕುಲಾ ಜೈಲಿನಿಂದ ಜೆ ಜೆ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಥಳಾಂತರಿಸಲಾಗಿತ್ತು. ಇಂದ್ರಾಣಿ ಮುಖರ್ಜಿ ಅವರಿಗೆ ಭಾನುವಾರದಿಂದಲೇ ಪ್ರಜ್ಞೆ ಮರಳಿತ್ತು.

ಸೋಮವಾರ ಕೋರ್ಟ್ ಇಂದ್ರಾಣಿ ಮುಖರ್ಜಿ ಮತ್ತು ಉಳಿದ ಇಬ್ಬರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 19ರವರೆಗೆ ವಿಸ್ತರಿಸಿ ಆದೇಶಿಸಿತ್ತು.

Write A Comment