ಕರ್ನಾಟಕ

ಆರೋಪಿಗಳ ಲೈಂಗಿಕ ಕಿರುಕುಳ ತಾಳದೆ ಆತ್ಮಹತ್ಯೆಗೆ ಶರಣಾದ 15 ವರ್ಷದ ಬಾಲಕಿ

Pinterest LinkedIn Tumblr

re suಬೆಂಗಳೂರು: ನೆರೆಮನೆಯ ಇಬ್ಬರು ವ್ಯಕ್ತಿಗಳ ಲೈಂಗಿಕ ಕಿರುಕುಳ ತಾಳದೆ 15 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ವರದಿಯಾಗಿದೆ.

ನೆರೆಮನೆಯ ಇಬ್ಬರು ಆರೋಪಿಗಳು ನನ್ನ ನಗ್ನ ಚಿತ್ರವನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡಿ ಹಲವಾರು ಬಾರಿ ಅತ್ಯಾಚಾರವೆಸಗಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಲಕಿ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಭಯ ಕುಟುಂಬಗಳ ಮಧ್ಯದ ದ್ವೇಷವೇ ಘಟನೆಗೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಘಟನೆ ಬಹಿರಂಗವಾಗುತ್ತಿದ್ದಂತೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment