ಮನೋರಂಜನೆ

ರಣ್ ಬೀರ್ ಕಪೂರ್ ಜೊತೆ ಕೆಲಸ ಮಾಡೋದು ಕಷ್ಟ: ಕತ್ರೀನಾ

Pinterest LinkedIn Tumblr

ranರಣ್ ಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಬಾಲಿವುಡ್ ಪ್ರಣಯ ಪಕ್ಷಿಗಳು. ನಿಜ ಜೀವನದಲ್ಲಿ ಅವರಿಬ್ಬರ ನಡುವೆ ಉತ್ತಮ ಸಂಬಂಧವಿದೆ. ಆದರೆ ಕತ್ರೀನಾ ಹೇಳೋ ಪ್ರಕಾರ ಕೆಲಸದ ವೇಳೆ ಮಾತ್ರ ನಾವು ಇಬ್ಬರೂ ಈ ರೀತಿ ಇರೋದು ಕಷ್ಟ ಅಂದಿದ್ದಾರೆ. ರಣ್ ಬೀರ್ ಜೊತೆ ಕೆಲಸ ಮಾಡೋದು ಬಹು ಕಷ್ಟ ಎಂದಿದ್ದಾರೆ.

ರಣ್ ಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಸದ್ಯ ಜಗ್ಗ ಜಾಸೂಸ್ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಹಿಂದೆಯೇ ಈ ಜೋಡಿ ಅಜಬ್ ಪ್ರೇಮ್ ಕಿ ಕಜಬ್ ಕಹಾನಿ ಹಾಗೂ ರಾಜನೀತಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿತ್ತು. ಆದ್ರೆ ಕ್ಯಾಟ್ ಹೇಳೋ ಪ್ರಕಾರ ರಣ್ ಬೀರ್ ಮುಂದೆ ಅಭಿನಯಿಸೋದು ಆಕೆಗೆ ತುಂಬಾನೇ ಕಷ್ಟವಾದ ಕೆಲಸವಂತೆ.

ಪರಸ್ಪರ ಪರಿಚಯವಿದ್ದಾಗ ಅಭಿನಯಿಸೋ ತುಂಬಾ ಕಷ್ಟ. ಯಾಕಂದ್ರೆ ನಾನು ಏನು ಅನ್ನೋದು ಅವರಿಗೆ ಗೊತ್ತಿರುತ್ತೆ. ಹಾಗೇ ಅವರು ಏನೂ ಅನ್ನೋದು ನನಗೆ ಗೊತ್ತಿರುತ್ತೆ.  ನಾನು ನಟನೆ ಮಾಡಿದ್ರೆ ಅದು ಅವನಿಗೆ ಪಕ್ಕಾ ನಟನೆ ಅನ್ನೋದು ಗೊತ್ತಾಗಿ ಬಿಡುತ್ತೆ. ನೈಜತೆ ಇರಲ್ಲ. ಆದ್ರೆ ಪರಿಚಯವಿಲ್ಲದವರ ಜೊತೆಯಾದ್ರೆ ಸುಲಭವಾಗಿ ನಟಿಸಬಹುದು ಎಂದು ಕತ್ರೀನಾ ಹೇಳಿದ್ದಾರೆ.

Write A Comment