ರಾಷ್ಟ್ರೀಯ

ಗಡಿಯಲ್ಲಿ ಒಳನುಸುಳುವ ಉಗ್ರರನ್ನು ಸೆದೆಬಡಿಯಲಿದೆ ರಿಮೋಟ್ ಕಂಟ್ರೋಲ್ ಮಷಿನ್‌ಗನ್‌

Pinterest LinkedIn Tumblr

camaraನವದೆಹಲಿ, ಅ.5-ನೆರೆಯ ರಾಷ್ಟ್ರದಿಂದ ಭಾರತದೊಳಗೆ ನುಸುಳುತ್ತಿರುವ ಆತಂಕವಾದಿಗಳ ಹಿಮ್ಮೆಟ್ಟಿಸಲು ಭಾರತೀಯ ಸೇನಾಪಡೆ ಹೊಸದೊಂದು ತಂತ್ರ ರೂಪಿಸಿದೆ. ಗಡಿರೇಖೆಯುದ್ದಕ್ಕೂ ರಿಮೋಟ್ ಕಂಟ್ರೋಲ್ ಮಷಿನ್‌ಗನ್‌ಗಳನ್ನು ಅಳವಡಿಸಿ  ಚಲನವಲನಗಳ ಬಗ್ಗೆ ನಿಗಾ ವಹಿಸಲು ಹೊಸ ಚಿಂತನೆಯನ್ನು ರಕ್ಷಣಾ ಇಲಾಖೆ ಮಾಡಿದ್ದು,  ಎಲ್ಲಾ ಅಂದುಕೊಂಡಂತೆ ಪ್ರಕ್ರಿಯೆಗಳು ನಡೆದರೆ ಈ ಆಧುನಿಕ ಶಸ್ತ್ರಾಸ್ತ್ರ ಭೂಸೇನೆಗೆ ಸಿಗಲಿದೆ.

ದೇಶಿ ನಿರ್ಮಿತ ಈ ಮಷಿನ್‌ಗನ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ ಯೋಧರ ಗಸ್ತು ತಿರುಗುವಿಕೆಯನ್ನು ತಕ್ಕಮಟ್ಟಿಗೆ  ಕಡಿಮೆ ಮಾಡಲಿದೆ.  ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಿ ರಾತ್ರಿ ವೇಳೆಯಲ್ಲೂ ಗಡಿಯುದ್ದಕ್ಕೂ ಹದ್ದಿನ ಕಣ್ಣಿಟ್ಟು, ತುರ್ತುಸಂದರ್ಭದಲ್ಲಿ ಈ ಮಷಿನ್‌ಗನ್‌ಗಳನ್ನು ರಿಮೋಟ್ ಮೂಲಕ ಕಾರ್ಯನಿರ್ವಹಿಸಲಿದೆ.

ಈಗಾಗಲೇ ಈ ಶಸ್ತ್ರದ ಪರೀಕ್ಷೆ ನಡೆದಿದ್ದು,  ಫಲಪ್ರದವಾಗಿದೆ ಎಂದು ಸೇನಾ ಪಡೆ ಮೂಲಗಳು ತಿಳಿಸಿವೆ.  ಕಳೆದ ಎರಡು ಮೂರು ತಿಂಗಳಲ್ಲಿ  ಉಗ್ರರು ಗಡಿಯೊಳಗೆ ನುಸುಳುವ 70 ಪ್ರಕರಣಗಳು ವರದಿಯಾಗಿವೆ.

Write A Comment