ಬಾಲಿವುಡ್’ನ ತ್ರಿವಳಿ ಖಾನ್’ಗಳಲ್ಲಿ ಸದಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಅಮೀರ್ ಖಾನ್ ಹಾಗೂ ಸಲ್ಮಾನ್ ಪಾರ್ಟಿವೊಂದರಲ್ಲಿ ಕಿತ್ತಾಡಿ ಕೊಂಡಿದ್ದಾರಾ? ಇವರಿಬ್ಬರು ದೋಸ್ತಿ ಬಿಟ್ಟು ದುಶ್ಮನ್ ಆದ್ರಾ? ಸದ್ಯ ಬಾಲಿವುಡ್ ಇಂತಹ ಪ್ರಶ್ನೆಗಳು ಕೇಳಿ ಬರುತ್ತಿದೆ.
ಬಿಟೌನ್’ನ ಸುದ್ದಿ ಪ್ರಕಾರ ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ದೂರವಾಗಿದ್ದಾರಂತೆ. ಕೆಲ ದಿನಗಳ ಹಿಂದೆ ನಡೆದಿದ್ದ ಪಾರ್ಟಿವೊಂದರಲ್ಲಿ ಪರಸ್ಪರ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಾಲಿವುಡ್ ಪಿಕೆ ಅಮೀರ್ ಖಾನ್ ಆಯೋಜಿಸಿದ್ದ ಈ ಪಾರ್ಟಿಯಲ್ಲಿ ಗೆಳೆಯ ಭಾಯಿಜಾನ್ ಸಲ್ಲು ಮಿಯಾನಿಗೂ ಆಹ್ವಾನವಿತ್ತು.
ಬಾಲಿವುಡ್ ಆಪ್ತ ಗಣ್ಯರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಲ್ಲು ಅಭಿನಯದ ಚಿತ್ರಗಳ ಆಯ್ಕೆ ಬಗ್ಗೆ ಪಿಕೆ ಅಮೀರ್ ಟೀಕಿಸಲು ಪ್ರಾರಂಭಿಸಿದ್ದಾರಂತೆ.
ಸಲ್ಲು ಮಿಯಾ ಚಿತ್ರಕ್ಕಾಗಿ ಹಾರ್ಡ್ ವರ್ಕ್ ಮಾಡಲ್ಲ, ಅವರು ಬೆಳ್ಳಿಪರದೆ ಮೇಲೆ ಏನೇ ಮಾಡಿದರೂ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರೆ ಎಂದು ಅಮೀರ್ ಖಾನ್ ಬಹಿರಂಗವಾಗಿ ಮಾತನಾಡಿದ್ದು ಸಲ್ಲುಗೆ ಹಿಡಿಸಲಿಲ್ಲ ಎನ್ನಲಾಗಿದೆ.
ಇದರಿಂದಾಗಿ ಗೆಳೆಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಲ್ಮಾನ್ ಖಾನ್ ಪಾರ್ಟಿಯನ್ನು ಅರ್ಧಕ್ಕೆ ಬಿಟ್ಟು ತೆರಳಿದರು ಎಂದು ಬಾಲಿವುಡ್ ವರದಿಗಳು ಹೇಳಿಕೊಂಡಿದೆ.
ಅಷ್ಟೇ ಅಲ್ಲದೆ ಸಲ್ಮಾನ್ ಅಭಿನಯದ ಸುಲ್ತಾನ್ ಹಾಗೂ ಅಮೀರ್ ಅಭಿನಯದ ದಂಗಲ್ ಚಿತ್ರಗಳ ಕಥೆಯೇ ಇವರಿಬ್ಬರ ಗೆಳೆತನ ಮುರಿದು ಬೀಳಲು ಮುಖ್ಯ ಕಾರಣ ಎಂಬ ಸುದ್ದಿ ಕೂಡ ಬಿಟೌನ್’ನಲ್ಲಿ ಹರಿದಾಡ್ತಿದೆ.
ಈ ಎರಡೂ ಚಿತ್ರಗಳು ಕುಸ್ತಿ ಪಂದ್ಯದ ಕಥಾಹಂದರವನ್ನು ಹೊಂದಿದ್ದು ಹೀಗಾಗಿ ಈ ಇಬ್ಬರು ಖಾನ್’ಗಳು ಬಹಿರಂಗವಾಗಿ ಕೆಸರೆರೆಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವಂದತಿಯು ನಿಜವಾಗಿದ್ದಲ್ಲಿ ಬಾಲಿವುಡ್’ನ ಇಬ್ಬರು ಸೂಪಾರ್ ಸ್ಟಾರ್’ಗಳ 20 ವರ್ಷದ ಸ್ನೇಹಕ್ಕೆ ಪುಲಿಸ್ಟಾಪ್ ಬೀಳಲಿದೆ.
-ಕಪ್ಪು ಮೂಗುತ್ತಿ
-ಉದಯವಾಣಿ